ಕಾರ್ಕಳ : ಒಂದು ತಾಲೂಕು ಒಂದು ಉತ್ಪನ್ನ ಕಲ್ಪನೆಯಡಿ ಕಾರ್ಕಳ ಕ್ಷೇತ್ರದ ಕೃಷಿವಲಯದಲ್ಲಿ ಹೊಸತನವನ್ನು ತುಂಬಿ ರೈತರ ಅಭಿವೃದ್ಧಿಯ ಆಶಯದೊಂದಿಗೆ ಕಾರ್ಲ ಕಜೆ ಹಾಗೂ ಬಿಳಿ ಬೆಂಡೆಯನ್ನು ಬ್ರ್ಯಾಂಡ್ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜ. 18ರಂದು ಕೃಷಿ ಸಚಿವ ಬ್ರ್ಯಾಂಡ್ ಪರಿಕಲ್ಪನೆಗೆ ಚಾಲನೆ ನೀಡಿರುತ್ತಾರೆ. ಕಾರ್ಲ ಕಜೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ದೊರೆತಿದ್ದು, ಭತ್ತ ಬೆಸಾಯಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ. ಅಂತೆಯೇ ಕಾರ್ಕಳದ ಬಿಳಿ ಬೆಂಡೆ ಬೇಸಾಯ ಮನೆ-ಮನೆಗಳಲ್ಲಿ ಬೆಳೆಸುವಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೂ. 1ರಿಂದ ಬೆಂಡೆ ಬೀಜ ವಿತರಣೆ
ಹೆಚ್ಚು ರುಚಿಕರ ಹಾಗೂ ಉತ್ತಮ ಪೋಷಕಾಂಶ ಹೊಂದಿರುವ ಕರಾವಳಿಗರ ಅಚ್ಚುಮೆಚ್ಚಿನ ಬೆಂಡೆ ಬೆಳೆಯಲು ಇದು ಸಕಾಲ. ಹೀಗಾಗಿ ಕ್ಷೇತ್ರದ ಸುಮಾರು 20 ಸಾವಿರ ಮನೆಗಳಿಗೆ ಬಿಳಿ ಬೆಂಡೆ ಬೀಜದ ಪ್ಯಾಕೆಟ್ಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿತರಣೆ ಮಾಡಲು ಕಾರ್ಯಕ್ರಮ ರೂಪಿಸಿದ್ದು, ಜೂನ್ 1 ರಿಂದ ವಿತರಣೆಯಾಗಲಿದೆ. ವಿವಿಧ ಸಂಘ-ಸಂಸ್ಥೆಗಳಾದ ಭಾರತೀಯ ಕಿಸಾನ್ ಸಂಘ, ರೋಟರಿ ಸಂಸ್ಥೆ, ತೋಟಗಾರಿಕೆ ಉತ್ಪಾದಕರ ಕಂಪನಿ ಹಾಗೂ ಇನ್ನಿತರೇ ಸಂಸ್ಥೆಗಳ ಮೂಲಕವು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೀಜಗಳ ವಿತರಣೆಯಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.
What happened dream MLA KARLA KAJE? Where did it went?