Saturday, October 16, 2021
spot_img
Homeಸಾಹಿತ್ಯ/ಸಂಸ್ಕೃತಿಕೊ(ರ)ಳಲಿನುಸಿರು

ಕೊ(ರ)ಳಲಿನುಸಿರು

ಉಸಿರೂ ಅವನದ್ದೇ, ಬಿದಿರೂ ಸಹ…
ಅರಳಿದ ನಾದ ಮಾತ್ರ ಅವಳೊಲುಮೆಯದ್ದು…
ಗರಿಯೂ ಅವನದ್ದೇ, ನವಿಲೂ ಅವನದ್ದೇ…
ಆದರೆ, ಹಾಕಿದ ಹೆಜ್ಜೆಯದಿದೆಯಲ್ಲಾ ಅವಳಂತರಂಗದ್ದು..

ಸ್ವರ, ತಾಳ, ಲಯ ಎಲ್ಲವೂ ಆ ನೀಲಿ ಶ್ಯಾಮನದ್ದೇ..
ಆದರೆ ಅದು ಹುಟ್ಟಲು ಕಾರಣವಾದ ಭಾವದೊಲುಮೆ, ಆ ರಾಧೆಯದ್ದು..
ಕೃಷ್ಣನೊಲುಮೆಯ ಕೊಳಲಿನುಸಿರಿನ ಜೀವವಿದೆಯಲ್ಲಾ…
ಅದರೊಳಗಿನ ಮಿಡಿತ, ಎದೆ ಬಡಿತ ಎಲ್ಲಾ ಅವಳದ್ದೇ..

ರಾಧೆಗೋ ಪಡೆಯುವ ಹಂಬಲ, ಘನ ಮೇಘಶ್ಯಾಮನಿಗೋ ಅವಳೇ ಎಲ್ಲಾ…
ಆದರೂ ಒಂದಾಗಿಲ್ಲ, ಬೇರಾದರೋ ಅದೂ ಇಲ್ಲ..
ಇಂದಿಗೂ ಚಿರನೂತನ ಪ್ರೀತಿಗೆ ಸಾಕ್ಷಿಯಾಗಿದ್ದಾರವರು..
ಮತ್ತೆ ಮನ್ವಂತರಗಳು ಕಳೆದರೂ, ಅವನ ಕೊ(ರ)ಳಲಿಗೆ ಅವಳೇ ಉಸಿರು…

ಭುವನಬಾಬು ಪುತ್ತೂರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!