ಕಾರ್ಕಳ : ರಾಷ್ಟ್ರ ಮಟ್ಟದಲ್ಲಿ ನಡೆಸಲಾಗುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆ.ಇ.ಇ. ಮೈನ್ನ ಫೆಬ್ರವರಿ 2021ರ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶ ದೊರೆತಿದ್ದು ಕಾರ್ಕಳ ಜ್ಞಾನಸುಧಾದ ಅಭಯ ಕಾಮತ್ ಅವರು ಗಣಿತದಲ್ಲಿ 100ಕ್ಕೆ 100 ಅಂಕ ಗಳಿಸುವುದರೊಂದಿಗೆ 99.86 ಪರ್ಸಂಟೈಲ್ ಗಳಿಸಿರುತ್ತಾರೆ. ಕಾಲೇಜಿನ ಶ್ರೇಯಸ್ ಪೈಯವರು 99.69, ಮನ್ವಿತ್ ಪ್ರಭು 99.35, ಪರ್ಸೆಂಟೈಲ್ ಗಳಿಸಿರುತ್ತಾರೆ. ಕಾಲೇಜಿನ 25 ವಿದ್ಯಾರ್ಥಿಗಳು 95 ಪರ್ಸಂಟೈಲ್ಗಿಂತ ಅಧಿಕ ಅಂಕಗಳಿಸಿರುತ್ತಾರೆ. ರಾಷ್ಟ್ರ ಮಟ್ಟದಲ್ಲಿ ಸುಮಾರು 6,61,151 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರು ಮೂವರು ವಿದ್ಯಾರ್ಥಿಗಳಿಗೆ ಒಟ್ಟು 1 ಲಕ್ಷ ಬಹುಮಾನ ಘೋಷಿಸಿದ್ದಾರೆ.
ಜೆ.ಇ.ಇ. ಮೈನ್ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ (99.86 ಪರ್ಸೆಂಟೈಲ್)
LEAVE A REPLY
Recent Comments
ಕಗ್ಗದ ಸಂದೇಶ
on
🏆Congratulations to the Achievers. Keep it up in the coming years too.