3ನೇ ಟೆಸ್ಟ್: ಸ್ಪಿನ್ ದಾಳಿಗೆ ಕುಸಿದ ಇಂಗ್ಲೆಂಡ್ 81 ರನ್ ಗಳಿಗೆ ಆಲೌಟ್, ಭಾರತಕ್ಕೆ 49 ರನ್‌ಗಳ ಗುರಿ

ಅಹಮದಾಬಾದ್: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ ದಾಳಿಗೆ ಆಂಗ್ಲರು ತತ್ತರಿಸಿದ್ದು 81 ರನ್ ಗಳಿಗೆ ಆಲೌಟ್ ಆಗಿದ್ದಾರೆ. 

ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 81 ರನ್ ಗಳಿಗೆ ಆಲೌಟ್ ಆಗಿದ್ದು ಈ ಮೂಲಕ ಭಾರತಕ್ಕೆ ಗೆಲ್ಲಲು 49 ರನ್ ಗಳ ಗುರಿ ನೀಡಿದೆ.

ಇಂಗ್ಲೆಂಡ್ ಪರ ಜೋ ರೂಟ್ 19, ಬೆನ್ ಸ್ಟೋಕ್ಸ್ 25 ಮತ್ತು ಪೊಪೆ 12 ರನ್ ಬಿಟ್ಟರೆ ಮತ್ಯಾರು ಎರಡಂಕಿ ಕೂಡ ದಾಟಿಲ್ಲ. ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದು ಕ್ರಮವಾಗಿ 5 ಮತ್ತು 4 ವಿಕೆಟ್ ಪಡೆದಿದ್ದಾರೆ.

ಭಾರತ-ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಮೊದಲ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಟೇಲ್ ಮಾರಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಪರಗುಟ್ಟಿದ್ದು 112 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಸಹ 145 ರನ್ ಗಳಿಗೆ ಆಲೌಟ್ ಆಗಿದ್ದು 33 ರನ್ ಗಳ ಮುನ್ನಡೆ ಸಾಧಿಸಿದೆ. 

ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 66, ಶುಭ್ಮನ್ ಗಿಲ್ 11, ಕೊಹ್ಲಿ 27, ಅಶ್ವಿನ್ 17 ಹಾಗೂ ಇಶಾಂತ್ ಶರ್ಮಾ ಅಜೇಯ 10 ರನ್ ಬಾರಿಸಿದ್ದರು.

ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಜೋ ರೂಟ್ 5, ಜಾಕ್ ಲೀಚ್ 4, ಜೋಫ್ರಾ ಆರ್ಚರ್ 1 ವಿಕೆಟ್ ಪಡೆದಿದ್ದಾರೆ.





























































































































































































































error: Content is protected !!
Scroll to Top