ಬೆಂಗಳೂರು: ಬೆಂಗಳೂರು ಮತ್ತು ಕೇರಳ ಗಡಿ ಭಾಗದ ಶಾಲೆಗಳನ್ನು ಹೊರತು ಪಡಿಸಿ, ರಾಜ್ಯಾದ್ಯಂತ ಫೆಬ್ರವರಿ 22 ರಿಂದ 6 ರಿಂದ 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 6, 7 ಮತ್ತು 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ತೆರೆಯಲಿವೆ, ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಶಾಲೆಗಳಲ್ಲಿ ಕೇವಲ 8ನೇತರಗತಿ ಮಾತ್ರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
1ರಿಂದ 5ನೇ ತರಗತಿಯವರೆಗೆ ವಿದ್ಯಾಗಮ ಯೋಜನೆ ಆರಂಭಿಸುವ ಸಂಬಂಧ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ, ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯವಲ್ಲ, ರಾಜ್ಯದಲ್ಲಿ ಎರಡನೇ ಹಂತದ ಕೋವಿಡ್ ಅಲೆಯಿರುವ ಸಾಧ್ಯತೆಯಿರುವ ಕಾರಣ, ಬೆಂಗಳೂರು ಮತ್ತು ಕೇರಳ ಗಡಿಯಲ್ಲಿ 6 ಮತ್ತು 7ನೇ ತರಗತಿಗಳು ಆರಂಭವಾಗುವುದಿಲ್ಲ, 8ನೇ ತರಗತಿಗಳು ಮಾತ್ರ ಆರಂಭವಾಗಲಿವೆ ಎಂದು ವಿಧಾನಸೌಧದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಫೆಬ್ರವರಿ 22 ರಿಂದ 6 ರಿಂದ 8ನೇ ತರಗತಿ ಆರಂಭ – ಪೂರ್ಣ ಪ್ರಮಾಣದಲ್ಲಿ ಶಾಲೆಗಳ ಒಪನ್ ಗೆ ಗ್ರೀನ್ ಸಿಗ್ನಲ್
Recent Comments
ಕಗ್ಗದ ಸಂದೇಶ
on
https://youtu.be/47zKJ8cyugc