Friday, September 24, 2021
spot_img
Homeರಾಜ್ಯಈ ವರ್ಷ ಶಾಲಾ ಮಕ್ಕಳಿಗೆ ಸೈಕಲ್‌ ಇಲ್ಲ

ಈ ವರ್ಷ ಶಾಲಾ ಮಕ್ಕಳಿಗೆ ಸೈಕಲ್‌ ಇಲ್ಲ

ಬೆಂಗಳೂರು,ನ. 20: ಈ ವರ್ಷ ಕೊರೊನದಿಂದಾಗಿ ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದು ಗೊತ್ತಾಗದೆ ಮಕ್ಕಳು ಗೊಂದಲದಲ್ಲಿದ್ದಾರೆ. ಒಂದು ವೇಳೆ ಶಾಲೆಗಳು ಪ್ರಾರಂಭವಾದರೂ ಸರಕಾರದಿಂದ ಮಕ್ಕಳಿಗೆ ಸಿಗುವ ಹಲವು ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ. ಯಡಿಯೂರಪ್ಪ ಸರಕಾರದ ಅತಿ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಉಚಿತ ಸೈಕಲ್‌ ವಿತರಣೆಯೂ ಈ ವರ್ಷ ಇಲ್ಲ.
ಶಾಲೆಗಳ ಪ್ರಾರಂಭ ಅನಿಶ್ಚಿತತೆಯಲ್ಲಿರುವುದರಿಂದ ಈ ವರ್ಷ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸದಿರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದರ ಬದಲಾಗಿ 2021-2022ನೇ ಶೈಕ್ಷಣಿಕ ವರ್ಷದಲ್ಲಿ ಎರಡೂ ವರ್ಷದ ಸೈಕಲ್‌ ವಿತರಣೆ ನಡೆಯಲಿದೆ.
ಈಗಾಗಲೇ ಶಾಲೆಗಳ ಆರಂಭ ಬಹಳ ವಿಳಂಬವಾಗಿದೆ. ಈಗ ಸೈಕಲ್‌ ಕೊಟ್ಟರೂ ಯಾವ ಪ್ರಯೋಜನವೂ ಆಗದು. ಹೀಗಾಗಿ ಮುಂದಿನ ವರ್ಷ 8 ಮತ್ತು 9ನೇ ತರಗತಿ ಮಕ್ಕಳಿಗೆ ಸೈಕಲ್‌ ವಿತರಿಸಲಾಗುವುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. 2006-07ನೇ ಶೈಕ್ಷಣಿಕ ವರ್ಷದಲ್ಲಿ ಸೈಕಲ್‌ ವಿತರಣೆ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಬಳಿಕ ಅದು ಸ್ಥಗಿತಗೊಂಡದ್ದು ಈ ವರ್ಷವೇ. ಇದು ಯಡಿಯೂರಪ್ಪ ಸರಕಾರ ಪ್ರಾರಂಭಿಸಿದ ಜನಪ್ರಿಯ ಕಾರ್ಯಕ್ರಮವೂ ಹೌದು.
ಸೈಕಲ್‌ ವಿತರಣೆ ಟೆಂಡರ್‌ ಪ್ರಕ್ರಿಯೆ ಪೂರ್ತಿಯಾಗಲು 3-4 ತಿಂಗಳು ಹಿಡಿಯುತ್ತದೆ. ಅಷ್ಟಾಗುವಾಗ ಶೈಕ್ಷಣಿಕ ವರ್ಷ ಮುಗಿದಿರುತ್ತದೆ. ಹೀಗಾಗಿ ಈ ವರ್ಷ ಸೈಕಲ್‌ ವಿತರಣೆ ಮಾಡದಿರಲು ತೀರ್ಮಾನಿಸಲಾಗಿದೆ. ಈ ವರ್ಷದ್ದೂ ಸೇರಿಸಿ ಮುಂದಿನ ವರ್ಷ ಕೊಡಲಾಗುವುದು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!