ಭಾರತೀಯ ಸಂಸ್ಕೃತಿ ಆಧ್ಯಾತ್ಮಿಕತೆ ತಳಹದಿಯಿಂದ ಕೂಡಿದೆ- ಶಂಕರ ನಾರಾಯಣ ಭಟ್‌

0

ಕಾರ್ಕಳ : ಭಾರತೀಯ ಸಂಸ್ಕೃತಿಯು ಆಧ್ಯಾತ್ಮಿಕತೆ, ವೈಚಾರಿಕತೆ ಹಾಗೂ ಭಾವನಾತ್ಮಕ ತಳಹದಿಯಿಂದ ಕೂಡಿದೆ. ಇದು ವೈಜ್ಞಾನಿಕತೆಗೆ ನಿಲುಕದಷ್ಟು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ವಿದ್ವಾನ್ ಶ್ರೀ ಶಂಕರ ನಾರಾಯಣ ಭಟ್ ಅಭಿಪ್ರಾಯಪಟ್ಟರು.

ಅವರು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಆನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ದೀಪಾವಳಿ ಹಬ್ಬದ ವಿಶೇಷ ಆಚರಣೆ ಪ್ರಯುಕ್ತ ನಡೆದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಕ್‌ ಸಿಟಿ ಅಧ್ಯಕ್ಷ ಪ್ರಶಾಂತ್ ಬೆಳಿರಾಯ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ ನ ಮಾರ್ಗದರ್ಶಕ ಡಾ. ಭರತೇಶ್ ಆದಿರಾಜ್, ಆನ್ಸ್  ಕ್ಲಬ್‌ನ ಅಧ್ಯಕ್ಷೆ ಮೇಘಾ ಪ್ರಶಾಂತ್ ಜೈನ್, ಚಂದ್ರಶೇಖರ ಹೆಗ್ಡೆ, ಜಗದೀಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆ

ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ  ಆನ್ಲೈನ್ ಮೂಲಕ ನಡೆಸಲಾದ ವಿವಿಧ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು. ಗೀತಾ ರಾವ್ ವಿಜೇತರ ಪಟ್ಟಿ ವಾಚಿಸಿದರು. ಗೀತಾ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣೇಶ ಬರ್ಲಾಯ ವಂದಿಸಿದರು.

Previous articleವಿನಾಯಕಬೆಟ್ಟುವಿನಲ್ಲಿ ಗೋಪೂಜೆ
Next articleಕಾಲೇಜು ಜೀವನ-ಮರೆಯಲಾಗದ ಪಯಣ

LEAVE A REPLY

Please enter your comment!
Please enter your name here