Wednesday, October 27, 2021
spot_img
Homeಯುವ ವೇದಿಕೆಶಿರ್ಲಾಲಿನ ಜಿನರಾಜ್ ಕಡಂಬರ ಆಲೂಬೋಂಡಾಕ್ಕೆ ಈಗಲೂ ಬರೀ 2 ರೂಪಾಯಿ

ಶಿರ್ಲಾಲಿನ ಜಿನರಾಜ್ ಕಡಂಬರ ಆಲೂಬೋಂಡಾಕ್ಕೆ ಈಗಲೂ ಬರೀ 2 ರೂಪಾಯಿ

ಕಾರ್ಕಳ : ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಕರ್ನಾಟಕ ಬ್ಯಾಂಕ್ ನ ಮುಂಭಾಗದಲ್ಲಿ 16 ವರ್ಷಗಳಿಂದ ಸಣ್ಣ ಹೋಟೆಲ್ ಒಂದನ್ನು ನಡೆಸುತ್ತಾ ಬಂದಿರುವ ಶಿರ್ಲಾಲಿನ ಜಿನರಾಜ್ ಕಡಂಬರ ಆಲೂಬೋಂಡಾದ ರುಚಿ ಅದ್ಬುತ.
ಅತ್ಯಂತ ಸಣ್ಣ ಜಾಗದಲ್ಲಿ 2004ರಲ್ಲಿ ಜೀವನೋಪಾಯಕ್ಕಾಗಿ ತಮ್ಮದೇ ಆದ ಒಂದು ಪುಟ್ಟ ಹೋಟೆಲ್ ಆರಂಭಿಸಿ ಪ್ರಾರಂಭದಲ್ಲಿ ಪೋಡಿ,ಕ್ಯಾಬೇಜ್ ಬೋಂಡಾ,ಬಜ್ಜಿ ಮುಂತಾದ ಅನೇಕ ಬಗೆಯ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಿದ್ದರು. ಈ ಪೈಕಿ ಇವರು ತಮ್ಮ ಐಕಾನ್ ಆಗಿ ಆಯ್ಕೆಮಾಡಿದ್ದು ಆಲೂಬೋಂಡಾವನ್ನು. ದಿನಸಿ ಬೆಲೆ ಏರಿಕೆಯಾದಾಗ ಹೊಟೇಲ್‌ ಗಳಲ್ಲಿ ತಿಂಡಿಗಳು ಬೆಲೆ ಹೆಚ್ಚುವುದು ಸಾಮಾನ್ಯ. ಆದರೆ ಇಷ್ಟರ ತನಕ ಜಿನರಾಜ್ ಕಡಂಬ ಅವರ ಆಲೂಬೋಂಡಾದ ಬೆಲೆ 2 ರೂಪಾಯಿಗಿಂತ ಹೆಚ್ಚಾಗಿಲ್ಲ!

ರುಚಿ ಮತ್ತು ಶುಚಿ ಎರಡಕ್ಕೂ ಕಡಂಬರ ಹೊಟೇಲ್‌ ಫೇಮಸ್.‌ ದಿನವೊಂದಕ್ಕೆ ಸುಮಾರು 500 ರಿಂದ 600ಕ್ಕೂ ಅಧಿಕ ಆಲೂಬೋಂಡಾ ವ್ಯಾಪಾರವಾಗುತ್ತಿದ್ದು ಸಮೀಪದ ಕೆರ್ವಾಶೆ,ಮುಂಡ್ಲಿ , ಅಂಡಾರು,ಅಜೆಕಾರು , ಮುನಿಯಾಲು,ವರಂಗ ಮುಂತಾದ ಕಡೆಗಳಿಂದ ಗ್ರಾಹಕರು ಬಂದು ಆಲೂಬೋಂಡಾದ ರುಚಿಯನ್ನು ಬಾಯಿತುಂಬ ಚಪ್ಪರಿಸುತ್ತಾರೆ.
ಬೆಳಗ್ಗೆ 10 ಗಂಟೆಯ ನಂತರ ಆಲೂಬೋಂಡಾ ತಯಾರಿಸುತ್ತ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಕುಶಲೋಪರಿ ವಿಚಾರಿಸುತ್ತಾ ಆತ್ಮೀಯವಾಗಿ ಬೆರೆಯುತ್ತಾರೆ. ಇಷ್ಟು ಕಡಿಮೆ ಬೆಲೆಯಲ್ಲಿ ಆಲೂಬೋಂಡಾ ಮಾರುವುದರ ರಹಸ್ಯ ಕೇಳಿದಾಗ ಜಿನರಾಜ್ ಕಡಂಬರು ನಗುತ್ತ “ಎಂಕ್ ಜಾಸ್ತಿ ಲಾಭ ಬೊಡ್ಚಿ ,ದಿನತ್ತ ಸಾಮಾನ್ ದ ಖರ್ಚಿ ಪೋದು ಒಂತೆ ಲಾಭ ಒರಿಂಡ ಯಾವು” ಎನುತ್ತಾರೆ.
ಬೇಕಾದಷ್ಟು ಇದ್ದರೂ ಮತ್ತಷ್ಟು ಲಾಭಗಳಿಸಬೇಕು ಎನ್ನುವವರ ಮಧ್ಯೆ ಗ್ರಾಹಕರ ಸಂತೃಪ್ತಿಯ ಕಡೆಗೆ ಆದ್ಯತೆ ಕೊಟ್ಟು ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟದೆ ಇರುವಂತೆ ಸೇವೆ ನೀಡುತ್ತಿರುವ ಇವರು ಲಾಕ್‌ ಡೌನ್‌ ಬಳಿಕವೂ ಆಲೂಬೋಂಡಾದ ಬೆಲೆ ಏರಿಸಿಲ್ಲ ಎನ್ನುವುದು ಗಮನಾರ್ಹ ವಿಚಾರ. 16 ವರ್ಷಗಳಿಂದ ಅದೇ ರುಚಿ . ಅದೇ ಬೆಲೆ, ಅದೇ ರುಚಿ,ಅದೇ ಗುಣಮಟ್ಟ, ಅದೇ ನಗುಮುಖದ ಸೇವೆ
ನಿಜಕ್ಕೂ ಅದ್ಬುತ !
ಅಂದಹಾಗೆ ಇವರು ಪ್ರಸ್ತುತ ಇತರ ತಿನಿಸುಗಳಿಗೆ ಗುಡ್ ಬಾಯ್ ಹೇಳಿ ಚಾ/ಕಾಫೀಯ ಜೊತೆಗೆ ಆಲೂಬೋಂಡವನ್ನೇ ತನ್ನ ಪ್ರಮುಖ ಐಕಾನ್ ಆಗಿ ಗ್ರಾಹಕರಿಗೆ ನೀಡುತ್ತಿದ್ದಾರೆ..
ಶಬರೀಶ್
ಎಂಪಿಎಂ ಕಾಲೇಜ್ ಕಾರ್ಕಳ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!