Sunday, October 17, 2021
spot_img
Homeಸ್ಥಳೀಯ ಸುದ್ದಿಪದವಿ ತರಗತಿಗಳು ಆರಂಭ - ಕಾರ್ಕಳದಲ್ಲಿ ನೀರಸ ಪ್ರತಿಕ್ರಿಯೆ

ಪದವಿ ತರಗತಿಗಳು ಆರಂಭ – ಕಾರ್ಕಳದಲ್ಲಿ ನೀರಸ ಪ್ರತಿಕ್ರಿಯೆ

ಕಾರ್ಕಳ : ಕೊರೊನಾ ಕಾರಣದಿಂದ ಎಂಟು ತಿಂಗಳ ದೊಡ್ಡ ಅಂತರದ ಬಳಿಕ ನ. 17ರಂದು ಕಾಲೇಜು ಆರಂಭವಾಗಿದೆ. ಕೊನೆಯ ಪದವಿ ವಿದ್ಯಾರ್ಥಿಗಳು ಹೆತ್ತವರ ಒಪ್ಪಿಗೆ ಪತ್ರ ಮತ್ತು ಕೋವಿಡ್‌ ರಿಪೋರ್ಟ್‌ ನೊಂದಿಗೆ ತರಗತಿಗೆ ಹಾಜರಾಗಲು ಕಾಲೇಜು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿತ್ತು. ಆದರೆ, ನ. 17ರಂದು ಕಾರ್ಕಳದ ಪದವಿ ಕಾಲೇಜಿಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯು ಅತ್ಯಂತ ಕನಿಷ್ಟ ಮಟ್ಟದಲ್ಲಿತ್ತು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಒಟ್ಟು 342 ವಿದ್ಯಾರ್ಥಿಗಳಲ್ಲಿ ಕೇವಲ 5 ವಿದ್ಯಾರ್ಥಿಗಳು ಹಾಜರಾಗಿದ್ದರು. ನಿಟ್ಟೆ ಪದವಿ ಕಾಲೇಜಿನ 197 ವಿದ್ಯಾರ್ಥಿಗಳ ಪೈಕಿ ಕೇವಲ ಇಬ್ಬರು ಹಾಜರಾಗಿದ್ದರು. ಎಸ್‌ವಿಟಿ ಮಹಿಳಾ ಕಾಲೇಜಿನಲ್ಲಿ 63 ವಿದ್ಯಾರ್ಥಿಗಳಲ್ಲಿ ಇಬ್ಬರು, ಮಂಜುನಾಥ್ ಪೈ ಸ್ಮಾರಕ ಸರಕಾರಿ ಪದವಿ ಕಾಲೇಜಿನಲ್ಲಿ 400 ವಿದ್ಯಾರ್ಥಿಗಳಲ್ಲಿ 171 ವಿದ್ಯಾರ್ಥಿಗಳ ಹಾಜರಾತಿ ಇತ್ತು. ಒಂದೆರಡು ದಿನಗಳ ಒಳಗೆ ಹಾಜರಾತಿ ಚೇತರಿಸುವ ಸಾಧ್ಯತೆಯಿದ್ದು, ಡಿಸೆಂಬರ್ ಮೊದಲ ವಾರ ಪ್ರಥಮ, ದ್ವಿತೀಯ ಪದವಿ ವಿದ್ಯಾರ್ಥಿಗಳಿಗೂ ತರಗತಿ ಆರಂಭ ಆಗಬಹುದು ಎನ್ನಲಾಗುತ್ತಿದೆ.

ಡೈಲಿ ಸ್ಯಾನಿಟೈಸ್‌

ಒಂದು ಬೆಂಚಿನಲ್ಲಿ ಮೂವರೇ ವಿದ್ಯಾರ್ಥಿಗಳು ಕೂರಬೇಕು. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದಲ್ಲಿ ಶೀಪ್ಟ್‌ ಆಧಾರದಲ್ಲಿ ತರಗತಿ ನಡೆಸಬೇಕು. ಪ್ರತಿದಿನ ತರಗತಿಯನ್ನು ಸ್ಯಾನಿಟೈಸ್ ಮಾಡಬೇಕೆಂಬ ನಿಯಮವಿದ್ದು ಕಾಲೇಜು ಇಂತಹ ನಿಯಮ ಅನುಸರಿಸಬೇಕಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!