Tuesday, September 28, 2021
spot_img
Homeದೇಶನಾಳೆಯಿಂದ ಶಬರಿಮಲೆ ಯಾತ್ರೆ ಶುರು : ಈ ಸಲ 86,000 ಮಂದಿಗೆ ಮಾತ್ರ ಅವಕಾಶ

ನಾಳೆಯಿಂದ ಶಬರಿಮಲೆ ಯಾತ್ರೆ ಶುರು : ಈ ಸಲ 86,000 ಮಂದಿಗೆ ಮಾತ್ರ ಅವಕಾಶ

ಶಬರಿಮಲೆ, ನ.15: ವಾರ್ಷಿಕ ಮಂಡಲ-ಮಕರ ವಿಳಕ್ಕು ಯಾತ್ರೆ ಸೋಮವಾರದಿಂದ (ನ.16) ಶುರುವಾಗಲಿದ್ದು, ಈ ಸಲ ಶಬರಿಮಲೆಗೆ ಗರಿಷ್ಠ 86,000 ಭಕ್ತರಿಗೆ ಮಾತ್ರ ದರ್ಶನ ಅವಕಾಶ ಸಿಗಲಿದೆ. ವರ್ಚುವಲ್‌ ಕ್ಯೂನಲ್ಲಿ ದರ್ಶನ ಕಾದಿರಿಸಿದವರಿಗೆ ಮಾತ್ರ ಯಾತ್ರೆಗೈಯ್ಯಲು ಅನುಮತಿ ನೀಡಲಾಗಿದೆ.
ಜ.20ರ ತನಕ ದರ್ಶನಕ್ಕೆ ಅವಕಾಶವಿದೆ. ಕೊರೊನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ನಿತ್ಯ 1,000 ಮತ್ತು ಶನಿವಾರ ಹಾಗೂ ಭಾನುವಾರ 2,000 ಭಕ್ತರಿಗಷ್ಟೇ ಸನ್ನಿಧಾನಕ್ಕೆ ಹೋಗಲು ಅವಕಾಶವಿದೆ.ಮಕರ ವಿಳಕ್ಕು ಸಂದರ್ಭದಲ್ಲಿ 5,000 ಮಂದಿಗೆ ದರ್ಶನಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ.
ನ.1ರಂದು ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಶುರುವಾಗಿತ್ತು. ಎರಡೇ ದಿನದಲ್ಲಿ ಬುಕ್ಕಿಂಗ್‌ ಭರ್ತಿಯಾಗಿ 42,000 ಮಂದಿ ವೈಟಿಂಗ್‌ ಲಿಸ್ಟ್‌ನಲ್ಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!