Friday, September 24, 2021
spot_img
HomeUncategorizedಸಕಲ ದುರಿತ ನೀಗುವ ಗೋಪೂಜೆ

ಸಕಲ ದುರಿತ ನೀಗುವ ಗೋಪೂಜೆ

ಭಾರತೀಯ ಪುರಾಣಗಳಲ್ಲಿ ಗೋಪೂಜೆಯು ಮನುಷ್ಯನ ಭೌತಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ದೋಷಗಳನ್ನು ಪರಿಹಾರ ಮಾಡುವ ಒಂದು ಸಾಧನ ಎಂದು ವರ್ಣಿತವಾಗಿದೆ. ದ್ವಾಪರ ಯುಗದಲ್ಲಿ ದ್ವಾರಕಾ ನಗರದಲ್ಲಿ ಶ್ರೀ ಕೃಷ್ಣನು ಗೊಲ್ಲರ ಜೊತೆಗೂಡಿ ಗೋವುಗಳ ಪೂಜೆ ಮಾಡಿದ ಉಲ್ಲೇಖ ಸಿಗುತ್ತದೆ. ಗೋವನ್ನು ಕಾಮಧೇನು, ಅದರ ಕರುವನ್ನು ನಂದಿನಿ ಎಂದು ಪೂಜಿಸುವ ಕ್ರಮ ಪುರಾಣಗಳಲ್ಲಿ ಇದೆ. ಕೃತ, ತ್ರೇತಾ, ದ್ವಾಪರ ಯುಗಗಳಲ್ಲಿ ಭಾರತದ ಪ್ರತೀ ಮನೆಯಲ್ಲಿ ದೇಸೀ ಗೋವುಗಳು ಇದ್ದವು ಮತ್ತು ಪ್ರತೀ ಊರಿಗೊಂದು ಗೋಶಾಲೆ ಇದ್ದಿತು ಎಂಬ ಉಲ್ಲೇಖಗಳು ದೊರೆಯುತ್ತವೆ. ಗೋಮಯ, ಗೋಮೂತ್ರ ಇವುಗಳಲ್ಲಿ ಶಕ್ತಿಶಾಲಿಯಾದ ಕ್ರಿಮಿನಾಶಕ ಮತ್ತು ರೋಗನಿರೋಧಕ ಶಕ್ತಿ ಇದೆ ಎನ್ನುವುದು ವೈಜ್ಞಾನಿಕವಾಗಿ ಸಾಧಿಸಲ್ಪಟ್ಟಿದೆ.
ದನದ ಹಾಲಿನಲ್ಲಿ ಅತ್ಯಧಿಕ ರೋಗ ನಿರೋಧಕ ಶಕ್ತಿ ಇದೆ ಮತ್ತು ತಾಯಿಯ ಹಾಲಿನ ನಂತರದ ಅತಿ ಪೌಷ್ಟಿಕ ಆಹಾರ ಎಂದು ಕೂಡ ವಿಜ್ಞಾನಿಗಳು ಹೇಳುತ್ತಾರೆ. ಭಾರತ ಕೃಷಿ ಆಧಾರಿತ ದೇಶವಾದ ಕಾರಣ ದನ, ಎತ್ತು ಇಲ್ಲದೆ ಕೃಷಿ ಕೆಲಸಗಳು ಪೂರ್ತಿ ಆಗುವುದಿಲ್ಲ. ಆದ್ದರಿಂದ ಗೋವುಗಳ ಪೂಜೆ ಅರ್ಥಪೂರ್ಣ ಮತ್ತು ನಮ್ಮ ಕೃತಜ್ಞತೆಯ ಸಂಕೇತವೇ ಆಗಿದೆ.
ದನಗಳ ಹಾಲಿನಲ್ಲಿ ನಾಲ್ಕು ಸಾಗರಗಳ ಶಕ್ತಿ ಅಡಗಿದೆ ಎಂದು ಉಲ್ಲೇಖ ಸಿಗುತ್ತದೆ. ನಾಲ್ಕು ಬ್ರಹ್ಮಾಂಡಗಳು ದನದ ದೇಹದಲ್ಲಿ ಸ್ಥಾನ ಪಡೆದಿವೆ. ಮೂವತ್ತಮೂರು ಕೋಟಿ ದೇವತೆಗಳು ದನದ ರೋಮದಲ್ಲಿ ವಾಸಿಸುತ್ತಾರೆ. ದನದ ಹಣೆಯಲ್ಲಿ ಈಶ್ವರನ ವಾಸಸ್ಥಾನ ಇದೆ. ಆದ್ದರಿಂದ ದನದ ಹಣೆಯ ಭಾಗದಲ್ಲಿ ಶುದ್ಧ ನೀರು ಸುರಿದರೆ ಶಿವಲಿಂಗಕ್ಕೆ ಅಭಿಷೇಕ ಮಾಡಿದ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಬಲವಾಗಿ ಬೆಳೆದಿದೆ. ಸುಬ್ರಮಣ್ಯ ದೇವರು ದನದ ಮೂಗಿನ ಭಾಗದಲ್ಲಿ ವಾಸ ಮಾಡುತ್ತಾರೆ. ಎರಡು ಕಿವಿಯ ಭಾಗದಲ್ಲಿ ಅಶ್ವಿನಿ ದೇವತೆಗಳ ವಾಸ ಸ್ಥಾನವಿದೆ. ಕಿವಿಯ ಪೂಜೆ ಮಾಡುವುದರಿಂದ ದೀರ್ಘಾಯುಷ್ಯ ಪ್ರಾಪ್ತಿ ಆಗುತ್ತದೆ. ನಾಲಿಗೆಯ ಪೂಜೆಯಿಂದ ಮಕ್ಕಳು ಆಗದವರಿಗೆ ಮಕ್ಕಳ ಭಾಗ್ಯ ದೊರೆಯುತ್ತದೆ ಎನ್ನುತ್ತದೆ ಹಿಂದೂ ನಂಬಿಕೆ.
ದನದ ನಾಲ್ಕು ಕೆಚ್ಚಲುಗಳಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ಶಕ್ತಿ ಇದೆ. ಗೊರಸುಗಳಲ್ಲಿ ನಾಗದೇವತೆ ವಾಸವಾಗಿ ಇರುವುದನ್ನು ನಮ್ಮ ನಂಬಿಕೆ ದೃಢಪಡಿಸುತ್ತದೆ. ಅಂತಹ ಗೋಮಾತೆಯ ಪೂಜೆಯಿಂದ ನಮ್ಮ ಎಲ್ಲಾ ದುರಿತಗಳು ನಾಶವಾಗಲಿ ಎನ್ನುವುದು ನಮ್ಮ ಆಶಯ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!