ಅರಳು ಪ್ರತಿಭೆ ಪ್ರತ್ಯುಷ ಕುಂದರ್

0

ಕಾರ್ಕಳ : ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ, ಹಾಡುಗಾರಿಕೆ, ಅಭಿನಯದಲ್ಲಿ ಆಸಕ್ತಿ ಹೊಂದಿದ್ದು ಉಡುಪಿ, ಕಾರ್ಕಳ ಅಲ್ಲದೆ ಅನೇಕ ಕಡೆಗಳಲ್ಲಿ ಮುದ್ದು ಕೃಷ್ಣ, ಫ್ಯಾನ್ಸಿ ಡ್ರೆಸ್, ಭಕ್ತಿ ಗೀತೆ, ಹಮ್ಮಿಂಗ್ ಬಾಲ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ/ದ್ವಿತೀಯ ಸ್ಥಾನಗಳನ್ನು ಪಡೆದಿರುವ ಪ್ರತ್ಯುಷ ಕುಂದರ್‌ ಬಹುಮುಖ ಪ್ರತಿಭೆಯ ಬಾಲಕಿ. ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಯುಕೆಜಿ ಓದುತ್ತಿರುವ ಈ ಪುಟ್ಟ ಬಾಲೆ ” ಆರದಿರಲಿ ಬದುಕು” ಆರಾಧನಾ ಸೇವಾ ಸಂಸ್ಥೆ ಆಯೋಜಿಸಿದ್ದ ಮುದ್ದು ಕಂದ ಫೋಟೋ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಮಗು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ.

ಅಭಿಮತ ಟಿವಿ ಆಯೋಜಿಸಿದ ವಾಯ್ಸ್ ಆಫ್ ಕೋಸ್ಟಲ್ ಸ್ಪರ್ಧೆಯಲ್ಲಿ ಸೆಮಿಫೈನಲಿಸ್ಟ್ ಆಗಿದ್ದಾಳೆ. ಕರ್ನಾಟಕ ಸಂಗೀತ, ಕರೋಕೆ, ವೆಸ್ಟರ್ನ್ ಡ್ಯಾನ್ಸ್ ಕಲಿಯುತ್ತಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲಿ ಅಭಿರುಚಿಯನ್ನು ಹೊಂದಿರುವ ಈಕೆ ಆಮಂತ್ರಣ ಪರಿವಾರ ಸಂಸ್ಥೆಯ ಸದಸ್ಯರಾಗಿದ್ದಾಳೆ. ನ್ಯಾಷನಲ್ ಮಾಡೆಲ್ ಹಂಟ್ ಐಕಾನ್ 2020 ಅಡಿಷನಲ್ಲಿ ಆಯ್ಕೆಯಾಗಿರುವ ಈಕೆ ಕಾರ್ಕಳದ ಪ್ರದೀಪ್ ಕುಂದರ್ ಹಾಗೂ ರೇವತಿ ದಂಪತಿಯ ಮುದ್ದಿನ ಮಗಳು.

Previous articleಅರುಣದ್ವಯರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಹೊಣೆ
Next articleಕೇಂದ್ರದ ಹೊಸ ಮಾರ್ಗಸೂಚಿ ಬಿಡುಗಡೆಯಾದ ಬಳಿಕ ಕಂಬಳಕ್ಕೆ ಅನುಮತಿ

LEAVE A REPLY

Please enter your comment!
Please enter your name here