Tuesday, September 28, 2021
spot_img
Homeದೇಶರಾಹುಲ್‌ ಗಾಂಧಿ ಬಗ್ಗೆ ಒಬಾಮ ಹೇಳಿರುವುದೇನು? ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತು ಈ ಮಾತು

ರಾಹುಲ್‌ ಗಾಂಧಿ ಬಗ್ಗೆ ಒಬಾಮ ಹೇಳಿರುವುದೇನು? ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತು ಈ ಮಾತು

ದಿಲ್ಲಿ, ನ. 13: ಅಮೆರಿಕದ ಮಾಜಿ ಅಧ್ಯಕ್ಸ ಬರಾಕ್‌ ಒಬಾಮ ಇನ್ನಷ್ಟೇ ಮಾರುಕಟ್ಟೆಗೆ ಮಾರುಕಟ್ಟೆಗೆ ಬರಬೇಕಾಗಿರುವ ತಮ್ಮ ಪುಸ್ತಕದಲ್ಲಿ ಕಾಂಗ್ರೆಸ್‌ ನಾಯಕ ರಾಹಿಲ್‌ ಗಾಂಧಿಯ ಬಗ್ಗೆ ಬರೆದಿರುವ ಕೆಲವು ಸಾಲುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಈ ಪುಸ್ತಕದಲ್ಲಿ ರಾಹುಲ್‌ ಗಾಂಧಿಯನ್ನು ಒಬಾಮ ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಗೆ ಹೋಲಿಸಿದ್ದಾರೆ. ರಾಹುಲ್‌ ಗಾಂಧಿ ಶಿಕ್ಷಕರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಯಂತೆ. ಆದರೆ ಅವರಿಗೆ ವಿಷಯವನ್ನು ಕರಗತ ಮಾಡಿಕೊಳ್ಳುವ ಮನೋಭಾವ, ಯೋಗ್ಯತೆ ಮತ್ತು ಉತ್ಸಾಹ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ ಎಂದು ಈ ಪುಸ್ತಕದಲ್ಲಿ ಒಬಾಮ ಬರೆದಿದ್ದಾರೆ.
‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಈ ಪುಸ್ತದಲ್ಲಿ ರಾಹುಲ್‌ ಗಾಂಧಿ ಮಾತ್ರವಲ್ಲದೆ ಅವರ ತಾಯಿ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಕುರಿತೂ ಉಲ್ಲೇಖಗಳಿವೆ. ಇದರಲ್ಲಿ ವಿಶ್ವದ ಹಲವು ರಾಜಕೀಯ ನಾಯಕರ ಬಗ್ಗೆ ಮತ್ತು ಹಲವು ವಿಷಯಗಳನ್ನು ದಾಖಲಿಸಿದ್ದಾರೆ.
ರಾಹುಲ್ ಗಾಂಧಿಯವರಲ್ಲಿ ಬೆಳೆಯಲು ಇಚ್ಚೆಯಿಲ್ಲದಿರುವ ಗುಣವಿದೆ. ಅಧ್ಯಾಪಕರು ಕೊಟ್ಟ ಕೆಲಸವನ್ನು ಮಾಡಿ ಮುಗಿಸಿ ಅವರನ್ನು ಮೆಚ್ಚಿಸಲು ನೋಡುವ ವಿದ್ಯಾರ್ಥಿಯಂತಹ ಗುಣ, ಆದರೆ ವಿಷಯದಲ್ಲಿ ಪರಿಣತಿ ಹೊಂದಲು ಅವರಲ್ಲಿ ಮನೋಭಾವ ಮತ್ತು ಉತ್ಸಾಹ, ಆಸಕ್ತಿಯ ಕೊರತೆಯಿದೆ ಎಂದು ಹೇಳಿದ್ದಾರೆ.
768 ಪುಟಗಳ ಪುಸ್ತಕ ನವೆಂಬರ್ 17ರಂದು ಮಾರುಕಟ್ಟೆಗೆ ಬರಲಿದ್ದು ಬರಾಕ್ ಒಬಾಮಾ ಅವರ ಬಾಲ್ಯಜೀವನ, ರಾಜಕೀಯ ಬದುಕು, 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವು ಹೀಗೆ ಅನೇಕ ಸಂಗತಿಗಳನ್ನು ನಮೂದಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!