Saturday, September 25, 2021
spot_img
Homeಸ್ಥಳೀಯ ಸುದ್ದಿಗೂಡುದೀಪದಲ್ಲಿ ಕೊರೊನಾ ಜಾಗೃತಿ ಸಂದೇಶ : ಕಾರ್ಕಳ ಪುರಸಭಾ ಸದಸ್ಯನ ಕ್ರಿಯಾಶೀಲ ಚಿಂತನೆ

ಗೂಡುದೀಪದಲ್ಲಿ ಕೊರೊನಾ ಜಾಗೃತಿ ಸಂದೇಶ : ಕಾರ್ಕಳ ಪುರಸಭಾ ಸದಸ್ಯನ ಕ್ರಿಯಾಶೀಲ ಚಿಂತನೆ

ಕಾರ್ಕಳ, ನ.13: ದೀಪಾವಳಿಯ ಗೂಡುದೀಪದ ಮೂಲಕ ಕೊರೊನಾ ಜಾಗೃತಿ ಮೂಡಿಸುವ‌ ಪ್ರಯತ್ನವನ್ನು ಪುರಸಭಾ ಸದಸ್ಯ ಶುಭದ್‌ ರಾವ್‌ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರೆ. ದೀಪಾವಳಿಯ ಪ್ರಯುಕ್ತ ತಯಾರಿಸಿರುವ ಸಂಪೂರ್ಣ ಪರಿಸರ ಸ್ನೇಹಿಯಾಗಿರುವ ಈ ಗೂಡು ದೀಪದಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಹ್ಯಾಂಡ್ ವಾಶ್ ಮಾಡಿ ಮತ್ತು ಸಾಮಾಜಿಕ ಅಂತರ ಕಾಪಾಡಿ ಎಂಬ ಚಿತ್ರದೊಂದಿಗೆ ಸಂದೇಶಗಳನ್ನು ಬರೆಯಲಾಗಿದ್ದು ಈ ಮೂಲಕ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಶುಭದ್ ರಾವ್‌ ಕಳೆದ‌ ಮೂರು ವರ್ಷದಿಂದ ಆನೆಕೆರೆ ಪಾರ್ಕಿನಲ್ಲಿ ಗೂಡುದೀಪ‌ ಸ್ಪರ್ಧೆಯನ್ನು ಆಯೋಜಿಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಈ ಬಾರಿ ಸ್ಪರ್ಧೆ ಆಯೋಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಗೂಡುದೀಪದಿಂದಲೇ ಏನಾದರೂ ಸಂದೇಶವನ್ನು ಸಾರ್ವಜನಿಕರಿಗೆ ನೀಡಬೇಕೆಂಬ ಸಂಕಲ್ಪದಿಂದ ಆಸಕ್ತಿಯಿಂದ ಈ ವಿಶಿಷ್ಟ ಗೂಡು ದೀಪ ರಚಿಸಿದ್ದಾರೆ. ಈ ಗೂಡು ದೀಪವು ಉತ್ತಮ ಸಂದೇಶದೊಂದಿಗೆ ನಾಗರಿಕರ ಗಮನವನ್ನು ಸೆಳೆಯುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!