Sunday, October 17, 2021
spot_img
Homeಸಾಹಿತ್ಯ/ಸಂಸ್ಕೃತಿಸಾಧನೆಯ ಹಾದಿಯತ್ತ ಸಾಗುತ್ತಿರುವ ಪುಟ್ಟ ಪೋರಿ ತನೀಷಾ

ಸಾಧನೆಯ ಹಾದಿಯತ್ತ ಸಾಗುತ್ತಿರುವ ಪುಟ್ಟ ಪೋರಿ ತನೀಷಾ

ಮಕ್ಕಳ ದಿನಾಚರಣೆ ಸಂದರ್ಭದಲ್ಲಿ newskarkala.com ಕಾರ್ಕಳ ಹಾಗೂ ಸುತ್ತಮುತ್ತಲಿನ ಕೆಲವು ಪ್ರತಿಭಾವಂತ ಮಕ್ಕಳನ್ನು ನಿಮಗೆ ಪರಿಚಯಿಸುತ್ತಿದೆ.

ತನ್ನ ಪ್ರಾಯಕ್ಕೂ ಮೀರಿದ ಪ್ರತಿಭೆಯಿಂದ ಜನಪ್ರಿಯಳಾದ ಐದು ವರ್ಷದ ಬಾಲೆ ತನಿಷಾ ಎಚ್ .ಜೆ. ಕಾರ್ಕಳದ ಬಂಗ್ಲೆಗುಡ್ಡೆಯ ಜಯರಾಮ್ – ಪ್ರಮೀಳಾ ದಂಪತಿಯ ಪುತ್ರಿ ಈ ತನೀಷಾ ಎಂಬ ಪುಟ್ಟ ಪೋರಿ ಮಾಡಿರುವ ಸಾಧನೆಗಳು ಅದೆಷ್ಟೋ!
ಬಟ್ಟಲು ಕಂಗಳ ತನೀಷಾ ತನ್ನ ಸಾಧನೆಯ ಹಾದಿಯಲ್ಲಿ ಸಾಗುತ್ತ ಎಲ್ಲರ ಮನದಲ್ಲಿ ಹರುಷದ ಹೊಂಗಿರಣ ಬೀರಿದ್ದಾಳೆ. ಮುದ್ದುಕೃಷ್ಣ, ಅಭಿನಯ, ಸಂಗೀತ,ನೃತ್ಯದಲ್ಲಿ ಅದ್ಭುತ ಪ್ರದರ್ಶನ ತೋರಿ ಬಹುಮಾನಗಳ ಸುರಿಮಳೆಯನ್ನೇ ಸುರಿಸಿದ್ದಾಳೆ. ಈಕೆಯ ಅದ್ಭುತ ಪ್ರತಿಭೆಯಿಂದ ಆದಿ ಗ್ರಾಮೋತ್ಸಾಹ ಗ್ರಾಮೀಣ ಕೋಗಿಲೆ ರನ್ನರ್ ಪ್ರಶಸ್ತಿ, ಜೇಸಿಐ ರೂರಲ್ ರೂವಾರಿ ನಮ್ಮೂರ ಜಾತ್ರೆ ವಿಶೇಷ ಪ್ರಶಸ್ತಿ, ಆರಾಧನಾ ವಾಟ್ಸಪ್ ಬಳಗದವರಿಂದ “ಬಾಳು ಬೆಳಕಿನೆಡೆಗೆ” ಅಭಿನಂದನೆ ,2019ರಲ್ಲಿ ಸೃಷ್ಟಿ ಕ್ರಿಯೇಷನ್ ಬೆಳುವಾಯಿ ವತಿಯಿಂದ ವಿಶೇಷ ಪ್ರಶಸ್ತಿ,ಅಭಿಮತ ಟಿವಿ ನಡೆಸಿದ ವಾಯ್ಸ್ ಆಫ್ ಕೋಸ್ಟಲ್ ನಲ್ಲಿ 4ನೇ ರನ್ನರ್ ಆಫ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾದ ಗರಿಮೆ ಈಕೆಯದ್ದು. ಕಾಸರಗೋಡು ದಸರಾ ಮಹೋತ್ಸವದಲ್ಲಿ ಮಕ್ಕಳ ದಸರಾ ಪ್ರಶಸ್ತಿ ಪಡೆದ ಹೆಗ್ಗಳಿಕೆ ಈಕೆಯದ್ದು‌.2020ರಲ್ಲಿ ಅಳದಂಗಡಿ ಆಮಂತ್ರಣ ಪರಿವಾರ ಪದ್ಮಾಂಬ ಸಂಭ್ರಮದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕೀರ್ತಿ ಇವಳದ್ದು.
ಮಧುರ ಕಂಠಸಿರಿ, ಅಮೋಘ ನೃತ್ಯ ಪ್ರದರ್ಶನ, ನಿರರ್ಗಳ ಮಾತಿನ ಚಾಕಚಕ್ಯತೆಯಿಂದ ತನೀಷಾಳಿಗೆ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ. ತುಳು ಆಲ್ಬಂ ಸಾಂಗ್ ಒಂದಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ.ಶಕಲಕ ಭೂಂ ಭೂಂ ಮತ್ತು ಗಿಲ್ಕಿ ಕನ್ನಡ ಮತ್ತು ಪಂಟರ್ಸ್‌ ತುಳು ಸಿನಿಮಾಗಳಲ್ಲಿ ನಟಿಸಿ ಬಣ್ಣದ ಲೋಕದಲ್ಲಿ ಚಿತ್ತಾರ ಮೂಡಿಸಿದ್ದಾಳೆ.
ಕಲೆಯೊಂದಿಗೆ ಕಲಿಕೆಯಲ್ಲೂ ಮೂಂಚೂಣಿಯಲ್ಲಿರುವ ಈಕೆ ಪ್ರಸ್ತುತ ಶ್ರೀ ಭುವನೇಂದ್ರ ವಿದ್ಯಾಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದಾಳೆ.
ಸವಿತಾ
ಶಿಕ್ಷಕಿ -ಶ್ರೀ ಭುವನೇಂದ್ರ ವಿದ್ಯಾಶಾಲೆ ಕಾರ್ಕಳ(ಪೆನ್‌ ಟೀಂ ಸದಸ್ಯೆ)

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!