Tuesday, September 28, 2021
spot_img
Homeದೇಶಬಾಲಿವುಡ್‌ ನಟ ಆಸಿಫ್‌ ಬಸ್ರಾ ಆತ್ಮಹತ್ಯೆ

ಬಾಲಿವುಡ್‌ ನಟ ಆಸಿಫ್‌ ಬಸ್ರಾ ಆತ್ಮಹತ್ಯೆ

ಮುಂಬಯಿ, ನ.12: ಬಾಲಿವುಡ್‌ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ನಟ ಆಸಿಫ್‌ ಬಸ್ರಾ ಇಂದು ಧರ್ಮಶಾಲಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದ ಕಾಂಪ್ಲೆಕ್ಸ್‌ ಒಂದರಲ್ಲಿ ಆಸಿಫ್‌ ಬಸ್ರಾ ಸ್ವಲ್ಪ ಆಸ್ತಿ ಹೊಂದಿದ್ದು, ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದರು. ಇದೇ ಕಾಂಪ್ಲೆಕ್ಸ್‌ ನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
53 ವರ್ಷದ ಆಸಿಫ್‌ ಬಸ್ರಾ ಬಾಲಿವುಡ್‌ನ ಜನಪ್ರಿಯ ಪೋಷಕ ನಟ. ಕಿರುತೆರೆಯಲ್ಲಿ ಕೂಡ ಅವರು ಸಾಕಷ್ಟು ಸರಣಿಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ಕಾಯ್‌ ಪೋ ಚೆ, ಹಿಚ್ಕಿ, ಕೃಶ್‌ 3, ಜಬ್‌ ವಿ ಮೆಟ್‌, ಬ್ಲ್ಯಾಕ್‌ ಫ್ರೈಡೇ, ಕಾಲಾಕಾಂಡಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!