Wednesday, October 27, 2021
spot_img
Homeಸ್ಥಳೀಯ ಸುದ್ದಿಇಂದು ಕಾರ್ಕಳದಲ್ಲಿ ಅಮರ ಶಿಲ್ಪಿ ವೀರ ಶಂಭು ಕಲ್ಕುಡ ತುಳು ಯಕ್ಷಗಾನ ಪ್ರದರ್ಶನ

ಇಂದು ಕಾರ್ಕಳದಲ್ಲಿ ಅಮರ ಶಿಲ್ಪಿ ವೀರ ಶಂಭು ಕಲ್ಕುಡ ತುಳು ಯಕ್ಷಗಾನ ಪ್ರದರ್ಶನ

ಕಾರ್ಕಳ, ನ.10: ಕಾರ್ಕಳದ ಯಕ್ಷಗಾನ ಪ್ರಿಯರಿಗೊಂದು ಸಿಹಿ ಸುದ್ದಿ. ಕೊರೊನಾ ಕಾರಣದಿಂದಾಗಿ ಬಹುಕಾಲದಿಂದ ಸ್ತಬ್ಧಗೊಂಡಿದ್ದ ಚೆಂಡೆಯ ಸದ್ದನ್ನು ಆಲಿಸುವ ಅವಕಾಶ ಇಂದು ಒದಗಿ ಬಂದಿದೆ. ಕಾರ್ಕಳದ ಮಾರಿಗುಡಿಯಲ್ಲಿಂದು “ಅಮರ ಶಿಲ್ಪಿ ವೀರ ಶಂಭು ಕಲ್ಕುಡ” ಎಂಬ ಕಾಲಮಿತಿಯ ತುಳು ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕೊರೊನಾ ಕಾವಳದ ಬಳಿಕ ಕಾರ್ಕಳದಲ್ಲಿ ಪ್ರದರ್ಶಿತವಾಗುತ್ತಿರುವ ಮೊದಲ ಯಕ್ಷಗಾನವಿದು.ಖ್ಯಾತ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಈ ಪ್ರದರ್ಶನ ನಡೆಯಲಿದೆ.ಉದ್ಯಮಿ ಡಿ.ಆರ್.‌ ರಾಜು ಅವರ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಯಕ್ಷ ತುಳುಪರ್ಬ ಮಂಗಳೂರು ಅರ್ಪಿಸುವ ತುಳು ಪರ್ಬ ಯಕ್ಷೋತ್ಸವ ಯಜ್ಞದ ಯಕ್ಷಗಾನವಿದು. ಕೊರೊನಾದಿಂದಾಗಿ ನೊಂದು ಬೆಂದು ಅಸಹಾಯಕರಾಗಿರುವ ಯಕ್ಷಗಾನ ಕಲಾವಿದರಿಗೆ ನೆರವಾಗುವ ಸದುದ್ದೇಶದಿಂದ ಈ ಸರಣಿ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶಗಳನ್ನು ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ. ಮನೋಹರ ಕುಮಾರ್‌ ತಿಳಿಸಿದ್ದಾರೆ.


ಇಂದು ಸಂಜೆ 6.30ರಿಂದ 9.30ರ ತನಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸುಂದರ ಕಾರ್ಕಳ ಎಂಬ ಬಡ ಯಕ್ಷಗಾನ ಕಲಾವಿದರೊಬ್ಬರಿಗೆ ಈ ಸಂದರ್ಭದಲ್ಲಿ ನೆರವಿನ ಮೊತ್ತವನ್ನು ನೀಡಲಾಗುವುದು ಎಂದು ಕಾರ್ಯದರ್ಶಿ ಸುರೇಂದ್ರ ಮಲ್ಲಿ ಮಾಹಿತಿ ನೀಡಿದ್ದಾರೆ.
ಇಂದಿನ ಪ್ರದರ್ಶನದಲ್ಲಿ ಭಾಗವತರಾಗಿ ಕಡಬ ರಾಮಚಂದ್ರ ರೈ ಮತ್ತು ಸುಜಯ ಹೆಗ್ಡೆ, ಚೆಂಡೆಯಲ್ಲಿ ಚಂದ್ರಶೇಖರ ಗುರುವಾಯೂನಕೆರೆ, ಮದ್ದಳೆಯಲ್ಲಿ ರವೀಂದ್ರ ಸಹಕರಿಸಲಿದ್ದಾರೆ. ಸ್ತ್ರೀ ವೇಷದಲ್ಲಿ ಅಕ್ಷಯ ಮಾರ್ನಾಡು ಮತ್ತು ರೋಹಿತ್‌, ಹಾಸ್ಯದಲ್ಲಿ ಸೀತಾರಾಮ ಕುಮಾರ್‌ ಇದ್ದಾರೆ. ಡಿ. ಮನೋಹರ ಕುಮಾರ್‌, ಧರ್ಮಸ್ಥಳ ಚಂದ್ರಶೇಖರ, ಪೆರ್ಲ ಜಗನ್ನಾಥ ಶೆಟ್ಟಿ, ಗುರುಪುರ ಸುರೇಂದ್ರ ಮಲ್ಲಿ, ಸದಾಶಿವ ಆಚಾರಿ, ವಾಮನ ಕುಮಾರ್‌ ವೇಣೂರು, ಪ್ರದೀಪ್‌ ಮಾಸ್ಟರ್‌, ನಿತ್ಯ ಅರಳ, ರವಿ ಇರ್ವತ್ತೂರು ಮತ್ತಿತರ ಖ್ಯಾತ ಕಲಾವಿದರು ಮುಮ್ಮೇಳದಲ್ಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!