ಖಾಸಗಿ ಶಿಕ್ಷಕರ ಸಂಘ ತಾಲೂಕು ಘಟಕದ ಅಧ್ಯಕ್ಷರಾಗಿ ವಿಜೇತ ರಾಣಿ ಆಯ್ಕೆ

0

ಕಾರ್ಕಳ : ಖಾಸಗಿ ಶಿಕ್ಷಕರ ಸಂಘ ಕರ್ನಾಟಕ ರಾಜ್ಯ ಸಂಸ್ಥೆಯ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ವಿಜೇತ ರಾಣಿ ಹಾಗೂ ಕಾರ್ಯದರ್ಶಿಯಾಗಿ ನವೀನ ಎ. ಬಜಗೋಳಿ ಆಯ್ಕೆಯಾಗಿದ್ದಾರೆ. ನ. 9ರಂದು ಸರಕಾರಿ ನೌಕರರ ಸಭಾಭವನದಲ್ಲಿ ನಡೆದ ಖಾಸಗಿ ಶಿಕ್ಷಕರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಗೌತಮ್‌, ಉಪಾಧ್ಯಕ್ಷರಾಗಿ ಪ್ರಸಾದ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ನಾಯಕ್, ಕೋಶಾಧಿಕಾರಿ(ಖಜಾಂಚಿ)ಯಾಗಿ ಸೌಮ್ಯ ಶೆಟ್ಟಿ, ನಿರ್ದೇಶಕರಾಗಿ ಉಷಾ ಶೆಟ್ಟಿ, ನಮಿತಾ, ಅರುಣ್, ರಾಜೇಶ್ ಕುಮಾರ್, ಹರ್ಷೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಸತೀಶ್ ಕುಮಾರ್ ಸಭೆ ನಿರ್ವಹಿಸಿದರು.

Previous articleಆರ್.‌ ಆರ್‌ . ನಗರದಲ್ಲಿ ಮುನಿರತ್ನ ಭರ್ಜರಿ ಗೆಲುವು
Next articleಜಯ ಬಾಬು ಸಾಲ್ಯಾನ್ ನಿಧನ

LEAVE A REPLY

Please enter your comment!
Please enter your name here