Wednesday, October 27, 2021
spot_img
Homeಕ್ರೈಂಪ್ರೀ ವೆಡ್ಡಿಂಗ್‌ ಫೋಟೊ ಶೋಟ್‌ ವೇಳೆ ದುರಂತ : ತೆಪ್ಪ ಮಗುಚಿ ಮದುವೆಯಾಗಲಿದ್ದ ಜೋಡಿ ಸಾವು

ಪ್ರೀ ವೆಡ್ಡಿಂಗ್‌ ಫೋಟೊ ಶೋಟ್‌ ವೇಳೆ ದುರಂತ : ತೆಪ್ಪ ಮಗುಚಿ ಮದುವೆಯಾಗಲಿದ್ದ ಜೋಡಿ ಸಾವು

ಮೈಸೂರು, ನ.9:ಕಾವೇರಿ ನದಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದ ಜೋಡಿಯೊಂದು ತೆಪ್ಪ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಸಂಭವಿಸಿದೆ. ನವೆಂಬರ್​ 22ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಚಂದ್ರು(28) ಮತ್ತು ಶಶಿಕಲಾ (20) ಮೃತಪಟ್ಟ ದುರ್ದೈವಿಗಳು. ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಇವರಿಬ್ಬರೂ ಕಾವೇರಿ ನದಿ ಮಧ್ಯೆ ತೆಪ್ಪದಲ್ಲಿ ಪ್ರೀ ವೆಡ್ಡಿಂಗ್​ ಫೋಟೋ ಶೂಟ್​ ಮಾಡುತ್ತಿದ್ದರು. ಆಗ ತೆಪ್ಪ ಮಗುಚಿದ ಪರಿಣಾಮ ಇಬ್ಬರೂ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳು. ಎರಡು ತೆಪ್ಪದಲ್ಲಿ ಒಟ್ಟು ಐವರು ನದಿ ಮಧ್ಯೆ ತೆರಳಿದ್ದರು. ಚಂದ್ರು-ಶಶಿಕಲಾ ಒಂದು ತೆಪ್ಪದಲ್ಲಿದ್ದರೆ, ಫೋಟೋಗ್ರಾಫರ್​ ಮತ್ತು ಸಂಬಂಧಿಕರಿಗಾಗಿ ಇನ್ನೊಂದು ತೆಪ್ಪ ಸಿದ್ಧಪಡಿಸಲಾಗಿತ್ತು. ಹರಿಯುತ್ತಿರುವ ನೀರಿನ ಮಧ್ಯೆ ತೆಪ್ಪದಲ್ಲಿ ನಿಂತು ಫೋಸ್​ ಕೊಟ್ಟಿದ್ದರು. ಆದರೆ ಆ ತೆಪ್ಪ ಮಗುಚಿ ಇಬ್ಬರೂ ಮೃತಪಟ್ಟಿದ್ದಾರೆ. ಇವರಿಬ್ಬರ ಶವವನ್ನೂ ನೀರಿನಿಂದ ಹೊರತೆಗೆಯಲಾಗಿದೆ.ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!