Tuesday, September 28, 2021
spot_img
Homeಸ್ಥಳೀಯ ಸುದ್ದಿಸಂಗೀತ ನಿರ್ದೇಶಕ ಕಾರ್ಕಳದ ಸುನಾದ್ ಗೌತಮ್ ಅವರಿಗೆ ಅವಳಿ ಪ್ರಶಸ್ತಿ

ಸಂಗೀತ ನಿರ್ದೇಶಕ ಕಾರ್ಕಳದ ಸುನಾದ್ ಗೌತಮ್ ಅವರಿಗೆ ಅವಳಿ ಪ್ರಶಸ್ತಿ

.
ಕಾರ್ಕಳ: ಜೀ ಕನ್ನಡದಲ್ಲಿ ಪ್ರಸಾರವಾದ “ಕುಟುಂಬ ಅವಾರ್ಡ್ಸ್” ನಲ್ಲಿ ಕಾರ್ಕಳದ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರಿಗೆ “ಜೊತೆಜೊತೆಯಲಿ” ಧಾರಾವಾಹಿಯ ಶೀರ್ಷಿಕೆ ಗೀತೆಗಾಗಿ ನೆಚ್ಚಿನ ಶೀರ್ಷಿಕೆ ಗೀತೆ ಪ್ರಶಸ್ತಿ ಒಲಿದು ಬಂದಿದೆ. ಜೊತೆಯಲ್ಲಿಯೇ ಇದೇ ಧಾರಾವಾಹಿಯ ತೆಲುಗು ರೂಪಾಂತರವಾಗಿ ಜೀ ತೆಲುಗುವಿನಲ್ಲಿ ಪ್ರಸಾರವಾಗುತ್ತಿರುವ “ಪ್ರೇಮ ಎಂತ ಮಧುರಂ” ನ ಸುನಾದ್ ಅವರ ಸಂಗೀತದ ಶೀರ್ಷಿಕೆ ಗೀತೆ ಕೂಡ ನೆಚ್ಚಿನ ಶೀರ್ಷಿಕೆ ಗೀತೆ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಸುನಾದ್ ಅವರು ಅವಳಿ ಪ್ರಶಸ್ತಿ ಪಡೆದರು.

ಸುನಿನಾದ ರೆಕಾರ್ಡಿಂಗ್‌ ಸ್ಟುಡಿಯೋ
ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್ ಅವರ ಪುತ್ರ ಸುನಾದ್ ತಮ್ಮ ತಂದೆಯವರಿಂದ ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತವನ್ನು ಎಳವೆಯಿಂದಲೇ ಕಲಿತು ತಮ್ಮ 14ನೆಯ ವಯಸ್ಸಿನಲ್ಲಿ ತಂದೆಯವರ ಅಲ್ಬಂ ಒಂದರಲ್ಲಿ ಒಂದು ಹಾಡಿಗೆ ಸಂಗೀತ ಸಂಯೋಜನೆ ಮಾಡಿರುತ್ತಾರೆ. ಅನಂತರ ಸಂಗೀತ ನಿರ್ದೇಶನ ಹಾಗೂ ಸೌಂಡ್ ಎಂಜಿನಿಯರಿಂಗ್ ಅನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಕಾಲೇಜು ವಿದ್ಯಾಭ್ಯಾಸದ ಜೊತೆಜೊತೆಯಲ್ಲಿಯೇ ಕಾರ್ಕಳದಲ್ಲಿ ಸುನಿನಾದ ರೆಕಾರ್ಡಿಂಗ್ ಸ್ಟುಡಿಯೋ ಸ್ಥಾಪಿಸಿದರು.

ಸುನಾದ್‌ ಸಂಗೀತ ಪಯಣ

ಪ್ರಾರಂಭದಲ್ಲಿ ಭಕ್ತಿಭಾವಗೀತೆಗಳ ಅಲ್ಬಂ ನಿರ್ಮಾಣದಲ್ಲಿ ತೊಡಗಿಸಿಕೊಂಡು ಮೊದಲ ವರ್ಷದ ಪದವಿ ಹೊತ್ತಿಗೆ ಧಾರಾವಾಹಿಗಳ, ಸಿನಿಮಾಗಳ ಸಂಗೀತ ನಿರ್ದೇಶನಕ್ಕೆ ಮುಂದಡಿಯಿಟ್ಟಿರು.
ಡಿ.ಡಿ. ಚಂದನ ವಾಹಿನಿಯಲ್ಲಿನ ಕೋಟಿ ಚೆನ್ನಯ, ಉದಯ ಟಿವಿಯ ಆನಂದ ಭೈರವಿ, ಸರಯೂ, ರಾಗಾನುರಾಗ, ಜೋಜೋ ಲಾಲಿ, ದೇವಯಾನಿ ಹಾಗೂ ಈಗ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಗಳಿಗೆ, ಜೀ ಕನ್ನಡದ ಜೊತೆಜೊತೆಯಲಿ, ಪರಮಾವತಾರಿ ಶ್ರೀಕೃಷ್ಣ, ಧಾರಾವಾಹಿಗಳಿಗೆ, ಕಲರ್ಸ್ ಕನ್ನಡದ ನನ್ನರಸಿ ರಾಧೆ, ಗಿಣಿರಾಮ ಧಾರಾವಾಹಿಗಳಿಗೆ ಇವರ ಸಂಗೀತ ನಿರ್ದೇಶನವಿದೆ.
ಉದಯ ವಾಹಿನಿಯ ಡಾನ್ಸ್ ಶೋ ಕಿಕ್, ಆದರ್ಶ ದಂಪತಿಗಳು, ಸುವರ್ಣವಾಹಿನಿಯ ಭರ್ಜರಿ ಕಾಮಿಡಿ ಶೋ, ಜೀ ಕುಟುಂಬ ಅವಾರ್ಡ್ ಮೊದಲಾದ ರಿಯಾಲಿಟಿ ಶೋಗಳಿಗೆ ಶೀರ್ಷಿಕೆ ಗೀತೆ ನೀಡಿರುತ್ತಾರೆ.

ತೆಲುಗಿನ ಪ್ರೇಮ ಎಂತ ಮಧುರಮ್, ತಮಿಳಿನ ನೇಯುಂ ನೆಂಜುಂ, ಮಲಯಾಳಂನ ನೀತನೇ ಎಂತ ಪೊನ್ವಸಂತಂ ಧಾರಾವಾಹಿಗಳಿಗೂ ಇವರ ಸಂಗೀತದ ಟೈಟಲ್ ಸಾಂಗ್, ಸೋಜಿಗ, ಪ್ರಾಣಕೊಡುವೆ ಗೆಳತಿ, ಚದುರಿದ ಕಾರ್ಮೋಡ, 400, ಗಲ್ಲಿಬೇಕರಿ, ಅನಂತು ವರ್ಸಸ್ ನುಸ್ರತ್, ಅಥರ್ವಣಂ, ನಿಮ್ಮೆಲ್ಲರ ಆಶೀರ್ವಾದ ಮುಂತಾದ ಕನ್ನಡ ಸಿನಿಮಾಗಳಿಗೆ, ಗೋಲ್ ಮಾಲ್ , ರಂಭಾರೂಟಿ, ರಡ್ಡೆಕ್ರೆ ಮುಂತಾದ ತುಳು ಚಿತ್ರಗಳಿಗೆ, ಬಾಯ್ಯೊ ಎನ್ನುವ ಕೊಂಕಣಿ ಮರಾಠಿ ಭಾಷೆಯ ಚಿತ್ರ ಹಾಗೂ ಬರಲಿರುವ ನಾಲ್ಕಾರು ಚಲನಚಿತ್ರಗಳಿಗೆ ಸುನಾದ್‌ ಸಂಗೀತ ನಿರ್ದೇಶನ ಮಾಡಿರುತ್ತಾರೆ.
ಸಿನೆಮಾಟೊಗ್ರಾಫರ್ ಆಗಿ ಸೋಜಿಗ, ಗೋಲ್ ಮಾಲ್, ಬಾಯ್ಯೋಗೆ ಕ್ಯಾಮೆರಾಮನ್ ಆಗಿ ಚಿತ್ರೀಕರಿಸಿದ ಇವರ ಕ್ಯಾಮೆರಾಕಲೆಯು ಸೈ ಎನಿಸಿಕೊಂಡಿದ್ದರು, ಈಗಾಗಲೇ ಎರಡುಮೂರು ಸಿನಿಮಾಗಳನ್ನು ಚಿತ್ರೀಕರಿಸುತ್ತಿದ್ದಾರೆ.

ಚಲನಚಿತ್ರನಿರ್ದೇಶನ ಮಾಡುವ ಕನಸನ್ನು ಹೊತ್ತಿರುವ ಇವರು ಬೆಂಗಳೂರಿಗೆ ವಲಸೆ ಹೋಗದೆ ಸಿನಿಮಾದ ಡಬ್ಬಿಂಗ್, ಎಡಿಟಿಂಗ್, ಕಲರಿಂಗ್, ಡಿಟಿಎಸ್ ಮಿಕ್ಸಿಂಗ್ ಮಾಡುವ ಸುಸಜ್ಜಿತ ಸ್ಟುಡಿಯೋ ಕಾರ್ಕಳದಲ್ಲಿಯೇ ಸ್ಥಾಪಿಸಿರುತ್ತಾರೆ. ಕಾರ್ಕಳದ ಹೆಮ್ಮೆಯ ಸುನಾದ್ ಅವರ ಕನಸುಗಳು ನನಸಾಗಲಿ, ಕಾರ್ಕಳದ ಕೀರ್ತಿ ಬೆಳಗುವ ಕಾರ್ಯಗಳು ಇವರಿಂದಾಗಲಿ ಎಂದು ನ್ಯೂಸ್ ಕಾರ್ಕಳ ಇವರನ್ನು ಅಭಿನಂದಿಸುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!