Sunday, October 17, 2021
spot_img
Homeಕ್ರೈಂ13 ವರ್ಷದಿಂದ ಪ್ರೀತಿಸಿದ್ದ ವರ ಮದುವೆ ದಿನವೇ ನಾಪತ್ತೆ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಯುವತಿ

13 ವರ್ಷದಿಂದ ಪ್ರೀತಿಸಿದ್ದ ವರ ಮದುವೆ ದಿನವೇ ನಾಪತ್ತೆ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಯುವತಿ

ಉಡುಪಿ, ನ.9 :ಮದುವೆ ದಿನವೇ ವರ ನಾಪತ್ತೆಯಾಗಿ ವಧು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಮಣಿಪಾಲ ಸಮೀಪದ ಪರ್ಕಳದಲ್ಲಿ ಸಂಭವಿಸಿದೆ. 13 ವರ್ಷಗಳಿಂದ ಪ್ರೀತಿಸಿದ್ದ ಯುವಕ ಮದುವೆಯ ದಿನವೇ ನಾಪತ್ತೆಯಾಗಿದ್ದು ಭಾರಿ ಚರ್ಚೆಗೂ ಕಾರಣವಾಗಿದೆ.
ಸುದೀರ್ಘ ಕಾಲದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಪರ್ಕಳದ ಗಣೇಶ್ ಹಾಗೂ ಮಣಿಪಾಲದ ಯುವತಿ ವಿವಾಹವಾಗಲು ತೀರ್ಮಾನಿಸಿದರು. ಪ್ರೀತಿಸುತ್ತಿದ್ದ ಜೋಡಿಯ ಮದುವೆಗೆ ಕಡೆಗೂ ಮನೆಯವರೂ ಒಪ್ಪಿಗೆ ಸೂಚಿಸಿದ್ದು ವಿವಾಹ ನಿಗದಿಯಾಗಿತ್ತು. ಆದರೆ ವಿವಾಹದ ದಿನವೇ ಗಣೇಶ್ ಕಾಣೆಯಾಗಿದ್ದಾನೆ. ಈ ಕಾರಣ ಮದುವೆ ನಿಂತು ಹೋಗಿದ್ದು ಯುವತಿ ಗಣೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
13 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಇದು ನಿಜವಾದ ಪ್ರೀತಿ ಎಂದು ನಂಬಿದ್ದಳು ಮತ್ತು ಗಣೇಶ್ ಆಕೆಯನ್ನು ಒಂದು ದಿನ ಮದುವೆಯಾಗುವುದಾಗಿ ಖಚಿತಪಡಿಸಿದ್ದ ಕಾರಣ ಆಕೆ ಅವನ ಮಾತಿಗೆ ಒಪ್ಪಿದ್ದಳು.ಅವರ ಸಂಬಂಧ ಬಹಳ ಮುಂದುವರಿದಿತ್ತು ಹಾಗೂ ಎಲ್ಲರಿಗೂ ತಿಳಿದಿತ್ತು.ಆದರೆ ಅವನು ಮದುವೆ ವಿಚಾರ ಬಂದಾಗಲೆಲ್ಲ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ನಂತರ ಯುವತಿಯ ಒತ್ತಡಕ್ಕೆ ಮಣಿದ ಗಣೇಶ್ ಮದುವೆಗೆ ಸಿದ್ಧನಾಗಿರುವಂತೆ ನಟಿಸಿದ. ಯುವತಿಯ ಕುಟುಂಬ ಕೂಡ ಮದುವೆಗೆ ಒಪ್ಪಿಕೊಂಡಿತು. ಗಣೇಶ್ ನ.6ರಂದು ವಿವಾಹವಾಗಲು ಒಪ್ಪಿದ್ದನು. ಅದರಂತೆ ವಿವಾಹ ಪೂರ್ವದ ಎಲ್ಲಾ ಆಚರಣೆಗಳೂ ನಡೆದಿದ್ದವು. ಆದರೆ ಗಣೇಶ್ ನ. 4 ರಂದು ಇನ್ನೊಬ್ಬ ಹುಡುಗಿಯೊಂದಿಗೆ ರಹಸ್ಯವಾಗಿ ವಿವಾಹವಾಗಲು ತಯಾರಾಗಿದ್ದ.

ಯುವತಿ ಈ ಯೋಜನೆಯನ್ನು ಅರಿತು ಈ ಮದುವೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಳು. ನಂತರ ಗಣೇಶ್ ತನ್ನ ದೀರ್ಘಾವಧಿಯ ಪ್ರೇಮಿಯನ್ನು ನವೆಂಬರ್ 6 ರಂದು ಮದುವೆಯಾಗಲು ಒಪ್ಪಿಕೊಂಡನು, ಆದರೆ ಮದುವೆಯ ದಿನದಂದು ವಧು ಅಲಂಕರಿಸಿಕೊಂಡು ವಿವಾಹ ಮಂಟಪಕ್ಕೆ ಆಗಮಿಸಿದ್ದಾಗ ವರ ಅಲ್ಲಿರಲಿಲ್ಲ.ಯುವತಿಯ ಕುಟುಂಬದವರು ಆತನ ಮನೆಗೆ ಹೋಗಿ ಆತ ನಾಪತ್ತೆಯಾಗಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಯುವತಿ ಆತನನ್ನು ಪತ್ತೆ ಮಾಡಲು ಮಾಡಿರುವ ಎಲ್ಲಾ ಪ್ರಯತ್ನ ವಿಫಲವಾದ ಬಳಿಕ ಅವನ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾಳೆ. ಕಳೆದ ಎರಡು ದಿನಗಳಿದ ಯುವತಿ ಕುಟುಂಬ ಗಣೇಶ್ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದರೂ ಸಹ ಆತನ ಸುಳಿವಿಲ್ಲ. ಹಾಗಾಗಿ ಇದೀಗ ಯುವತಿಯ ಕುಟುಂಬ ಮಣಿಪಾಲ ಪೋಲೀಸ್ ಠಾಣೆ ಮೆಟ್ಟಿಲೇರಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!