Tuesday, September 28, 2021
spot_img
Homeಸ್ಥಳೀಯ ಸುದ್ದಿಬೈಲೂರಿನಲ್ಲಿ ಕಾರ್ಲ ಸುಪರ್‌ ಮಾರ್ಕೆಟ್‌ ಶಾಖೆ ಶುಭಾರಂಭ

ಬೈಲೂರಿನಲ್ಲಿ ಕಾರ್ಲ ಸುಪರ್‌ ಮಾರ್ಕೆಟ್‌ ಶಾಖೆ ಶುಭಾರಂಭ

ಕಾರ್ಕಳ : ಒಂದೇ ಸೂರಿನಡಿ ಉತ್ತಮ ಗುಣಮಟ್ಟದ ಎಲ್ಲ ರೀತಿಯ ಗೃಹಪಯೋಗಿ ವಸ್ತುಗಳು ಲಭ್ಯವಿರುವ ಮಳಿಗೆ ಕಾರ್ಲ ಸೂಪರ್‌ ಮಾರ್ಕೆಟ್‌ ಬ್ರಾಂಚ್‌ ಇದೀಗ ಬೈಲೂರಿನ ಬೆನಕಾ ಅಪಾರ್ಟ್ ಮೆಂಟ್‌ನಲ್ಲಿ ನ. 9ರಂದು ಶುಭಾರಂಭಗೊಂಡಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಬಳಿಕ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಆನೆಕೆರೆ ಭವಾನಿ ಸರ್ಕಲ್‌ ಬಳಿ ಕಾರ್ಯನಿರ್ವಹಿಸುತ್ತಿರುವ ಕಾರ್ಲ ಸೂಪರ್‌ ಮಾರ್ಕೆಟ್‌ ಗುಣಮಟ್ಟದ ಸಾಮಗ್ರಿಗಳನ್ನು ಸ್ಪರ್ಧಾತ್ಮಕ ದರದಲ್ಲಿ ನೀಡುವ ಮೂಲಕ ಮನೆಮಾತಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಕಾರ್ಲ ಸೂಪರ್‌ ಮಾರ್ಕೆಟ್‌ ತಂಡ ಇದೀಗ ಬೈಲೂರಿನಲ್ಲಿ ನೂತನ ಸಂಸ್ಥೆ ತೆರೆಯುವ ಮೂಲಕ ಈ ಭಾಗದ ಜನತೆಯಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು. ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು, ಉದಯ ಎಸ್.‌ ಕೋಟ್ಯಾನ್‌, ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ್‌, ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಮಾಜಿ ಸದಸ್ಯ ವಿಕ್ರಂ ಹೆಗ್ಡೆ ಉಪಸ್ಥಿತರಿದ್ದರು. ನೂತನ ಸಂಸ್ಥೆಯನ್ನು ಪ್ರೋತ್ಸಾಹಿಸುವಂತೆ ಸಂಸ್ಥೆಯ ಪಾಲುದಾರರಾದ ದೀಕ್ಷಿತ್‌ ಜೈನ್‌, ಅಭಿನಂದನ್‌ ಜೈನ್‌, ರೂಪೇಶ್‌ ಜೈನ್‌ ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!