Wednesday, October 27, 2021
spot_img
Homeರಾಜ್ಯವಿಜಯೇಂದ್ರ ವಿಧಾನಸಭೆ ಪ್ರವೇಶ?

ವಿಜಯೇಂದ್ರ ವಿಧಾನಸಭೆ ಪ್ರವೇಶ?

ಬೆಂಗಳೂರು, ನ.8 : ಬಿಜೆಪಿಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಶಾಸಕರನ್ನಾಗಿ ಮಾಡಲು ಪಕ್ಷದೊಳಗಿನ ಒಂದು ಗುಂಪು ಪ್ರಯತ್ನ ನಿರತವಾಗಿದೆ.
ಪ್ರಸ್ತುತ ಬೀದರ್‌ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಇಲ್ಲಿಗೆ ನಡೆಯುವ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ಬಿಜೆಪಿ ಆಭ್ಯರ್ಥಿಯನ್ನಾಗಿ ಮಾಡಲು ಪ್ರಬಲ ಲಾಬಿಯೊಂದು ರಂಗಕ್ಕಿಳಿದಿದೆ.
ಬಸವಕಲ್ಯಾಣದ ಕಾಂಗ್ರೆಸ್‌ ಶಾಸಕ ಬಿ. ನಾರಾಯಣ ರಾವ್‌ ಅವರು ಕಳೆದ ತಿಂಗಳು ಕೊರೊನಾ ಸೋಂಕಿನಿಂದಾಗಿ ತೀರಿಕೊಂಡ ಕಾರಣ ಈ ಕ್ಷೇತ್ರ ತೆರವಾಗಿದೆ. ಸದ್ಯದಲ್ಲೆ ಇಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ. ಬಸವಕಲ್ಯಾಣದಲ್ಲಿ ಲಿಂಗಾಯತ ಮತಗಳು ಹೆಚ್ಚಿಗೆ ಇರುವುದರಿಂದ ವಿಜಯೇಂದ್ರ ಅವರಿಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವನ್ನು ಮುಂದಿಡಲಾಗಿದೆ.
ನಾರಾಯಣ ರಾವ್‌ ಬೆಸ್ತ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಅವರು ಬಸವಣ್ಣನವರ ಅನುಭವ ಮಂಟಪದ ಮರು ಸ್ಥಾಪನೆಯ ಬೇಡಿಕೆಯನ್ನು ಬೆಂಬಲಿಸಿ ಲಿಂಗಾಯತ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದರು.
ವಿಜಯೇಂದ್ರ ಅವರಿಗೆ ಪಕ್ಷ ಟಿಕೇಟ್‌ ನೀಡಿದರೆ ಇದು ಅವರು ಎದುರಿಸುವ ಮೊದಲ ಚುನಾವಣೆ ಆಗಲಿದೆ. 2018ರಲ್ಲಿ ಅವರಿಗೆ ಟಿಕೇಟ್‌ ನೀಡಲು ಬಲವಾದ ಬೇಡಿಕೆ ಇದ್ದರೂ ಪಕ್ಷ ನಿರಾಕರಿಸಿತ್ತು. ಆದರೆ ವಿಜಯೇಂದ್ರ ರಾಜಕೀಯದಲ್ಲಿ ಸಕ್ರಿಯವಾಗಿದ್ದುಕೊಂಡು ಯಡಿಯೂರಪ್ಪನವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!