Sunday, October 17, 2021
spot_img
Homeಸ್ಥಳೀಯ ಸುದ್ದಿಹೆಬ್ರಿಯಲ್ಲಿ ಜೆಡಿಎಸ್ ನೂತನ‌ ಕಚೇರಿ ಉದ್ಘಾಟನೆ

ಹೆಬ್ರಿಯಲ್ಲಿ ಜೆಡಿಎಸ್ ನೂತನ‌ ಕಚೇರಿ ಉದ್ಘಾಟನೆ

ಹೆಬ್ರಿ,ನ.8 : ಬಿಜೆಪಿ ಭ್ರಷ್ಟಾಚಾರಿಗಳ ಪಕ್ಷ, ಬಿಜೆಪಿ ನಾಯಕರು ಮತ್ತು ಪಕ್ಷದ ಉದ್ದೇಶವೇ ಭ್ರಷ್ಟಾಚಾರ ಮಾಡುವುದು. ಕೊರೊನಾ ಸಂಕಷ್ಟದಿಂದ ಜನತೆ ಉದ್ಯೋಗ ಇಲ್ಲದೆ, ತುತ್ತು ಅನ್ನಕ್ಕೂ ಗತಿ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಕೊರೊನಾ ಹೆಸರಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ರಾಜ್ಯ ನಾಯಕ ಎಸ್.ಎಲ್.ಭೋಜೇಗೌಡ ಹೇಳಿದರು.
ಭಾನುವಾರ ಹೆಬ್ರಿಯ ವಿನೂ ನಗರದಲ್ಲಿ ಜೆಡಿಎಸ್ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿಯವರ ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಜನರ ಮುಂದಿಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ. ದುಡಿಯುವ ಕ್ಯೆಗಳಿಗೆ ಉದ್ಯೋಗ ಇಲ್ಲ. ಕೃಷಿಕರು, ಕಾರ್ಮಿಕರು ಸೇರಿ ಜನತೆ ಕಷ್ಟದಲ್ಲಿ ಇದ್ದಾರೆ. ಕಾರ್ಮಿಕರು, ಮಡಿವಾಳ, ಸವಿತಾ ಸಮಾಜ, ರಿಕ್ಷಾ ಚಾಲಕರಿಗೆ ಪ್ಯಾಕೇಜ್ ನೆರವು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಆದರೆ ಈ ತನಕ ಯಾರಿಗೂ ಪ್ಯಾಕೇಜ್ ತಲುಪಿಲ್ಲ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಯೋಜನೆಗಳು ಎಲ್ಲವೂ ಕೇವಲ ಘೋಷಣೆಗೆ ಸಿಮೀತವಾಗಿದೆ ಎಂದು ಆರೋಪಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ದೇಶದಲ್ಲೇ ಮೊದಲ ಭಾರಿಗೆ ದಾಖಲೆಯ ಸಾಲ ಮನ್ನಾವನ್ನು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮಾಡಿ ಕೃಷಿಕರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ರೈತರು ಇನ್ನೂ ಸಾಲವೇ ಮಾಡಬಾರದು ಆ ರೀತಿಯ ಯೋಜನೆ ರೂಪಿಸುವ ಕನಸು ಕುಮಾರಸ್ವಾಮಿ ಕಂಡಿದ್ದರು.‌ಆದರೆ ಅವರಿಗೆ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಲು ಅವಕಾಶವನ್ನು ತಪ್ಪಿಸಲಾಯಿತು ಎಂದರು.
ನಮ್ಮ ಜಿಲ್ಲೆಯ ಪ್ರತಿಭಾವಂತ ಮಕ್ಕಳು ಕಲಿತು ಉದ್ಯೋಗಕ್ಕಾಗಿ ಹೊರ ದೇಶ, ರಾಜ್ಯಕ್ಕೆ ಹೋಗುತ್ತಿದ್ದಾರೆ. ಅವರಿಗೆ ತಮ್ಮೂರಿನಲ್ಲೇ ಉದ್ಯೋಗ ನೀಡಲು ಐಟಿ ಪಾರ್ಕ್ ಸ್ಥಾಪಿಸಿ ಉದ್ಯೋಗ ಕೊಡಿ ಎಂದು ಮನವಿ ಮಾಡಿದ ಯೋಗೀಶ್ ಶೆಟ್ಟಿ ಕ್ಯೆಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಘೋಷಿಸಿದ ಫರ್ನಿಚರ್ ಪಾರ್ಕ್‌ ಕುಮಾರಸ್ವಾಮಿ ಕೊಡುಗೆ. ಕಾರ್ಕಳದ ಎಣ್ಣೆ ಹೊಳೆಯ 108 ಕೋಟಿಯ ಬೃಹತ್ ಏತ ನೀರಾವರಿ ಯೋಜನೆ ಕುಮಾರಸ್ವಾಮಿ ಕೊಡುಗೆ ಎಂದು ಯೋಗೀಶ್ ಶೆಟ್ಟಿ ಹೇಳಿದರು.
ಕಾರ್ಕಳ ಕ್ಷೇತ್ರದ ಜೆಡಿಎಸ್ ನೂತನ ಅಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಅಧಿಕಾರ ಸ್ವೀಕರಿಸಿ ಮಾತನಾಡಿ ಪಕ್ಷವನ್ನು ಬಲ ಪಡಿಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಹೆಬ್ರಿಯ ಜೆಡಿಎಸ್ ಕಚೇರಿಯನ್ನು ಸ್ಥಾಪಿಸಲು ಸ್ಥಳಾವಕಾಶ ನೀಡಿದ ಬೆಂಗಳೂರಿನ ಉದ್ಯಮಿ ಸೀತಾರಾಮ ಶೆಟ್ಟಿ ಅವರ ತಂದೆ ವೀರಣ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಜೆಡಿಎಸ್ ಉಡುಪಿ ಜಿಲ್ಲಾ ವೀಕ್ಷಕ ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಉಪಾಧ್ಯಕ್ಷ ವೆಂಕಟೇಶ್, ಕಿಶೋರ್ ಕುಂದಾಪುರ, ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರ್, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಶುದ್ಧೀನ್, ರೈತ ಘಟಕದ ಪ್ರಕಾಶ ಶೆಟ್ಟಿ, ಬಿ.ಕೆ.ಮಹಮ್ಮದ್, ರಮೇಶ್ ಕುಂದಾಪುರ ಸಹಿತ ಜೆಡಿಎಸ್ ವಿವಿಧ ಘಟಕಗಳ ಪ್ರಮುಖರು, ಮುಖಂಡರು,ನಾಯಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!