Wednesday, October 27, 2021
spot_img
Homeಕ್ರೈಂಡ್ರಗ್‌ ಕೇಸ್‌ : ಖ್ಯಾತ ನಿರ್ಮಾಪಕ ನಾಡಿಯಡ್‌ವಾಲಾ ಮನೆ ಮೇಲೆ ಎನ್‌ಸಿಬಿ ದಾಳಿ

ಡ್ರಗ್‌ ಕೇಸ್‌ : ಖ್ಯಾತ ನಿರ್ಮಾಪಕ ನಾಡಿಯಡ್‌ವಾಲಾ ಮನೆ ಮೇಲೆ ಎನ್‌ಸಿಬಿ ದಾಳಿ

ಮುಂಬಯಿ, ನ. 8 : ಬಾಲಿವುಡ್‌ ತಾರೆಯರ ಡ್ರಗ್‌ ನಂಟಿನ ತನಿಖೆಗೆ ಸಂಬಂಧಿಸಿ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೊ ಅಧಿಕಾರಿಗಳು ಇಂದು ಖ್ಯಾತ ನಿರ್ಮಾಪಕ ಫಿರೋಜ್‌ ನಾಡಿಯಡ್‌ವಾಲಾ ಮನೆ ಮೇಲೆ ದಾಳಿ ಮಾಡಿದ್ದಾರೆ.
ಪಶ್ಚಿಮ ಉಪನಗರದಲ್ಲಿರುವ ನಿರ್ಮಾಪಕನ ಮನೆ ಮೇಲೆ ದಾಳಿ ಮಾಡಿದಾಗ ಒಂದಷ್ಟು ಮಾದಕ ವಸ್ತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯಾಗುವ ಸಂದರ್ಭದಲ್ಲಿ ನಾಡಿಯಡ್‌ವಾಲಾ ಮನೆಯಲ್ಲಿ ಇರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಅಧಿಕಾರಿಗಳು ಡ್ರಗ್‌ ಜಾಲದಲ್ಲಿ ಚಿತ್ರರಂಗದ ಕೆಲವು ಘಟಾನುಘಟಿಗಳು ಶಾಮೀಲಾಗಿದ್ದಾರೆ ಎಂದು ಹೇಳಿದ್ದರು.
ಫಿರೋಜ್‌ ನಾಡಿಯಡ್‌ವಾಲಾ ಅವರ ಹೆಂಡತಿಯನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ನಾಡಿಯಡ್‌ವಾಲಾ ಅವರನ್ನು ವಿಚಾರಣೆಗೆ ಕರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಿರೋಜ್‌ ನಾಡಿಯಡ್ ವಾಲಾ
ಹಲವು ಯಶಸ್ವಿ ಹಿಂದಿ ಸಿನೇಮಾಗಳನ್ನು ನಿರ್ಮಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!