Tuesday, September 28, 2021
spot_img
Homeದೇಶಜನವರಿಯಿಂದ ಎಲ್ಲ ಚತುಷ್ಚಕ್ರ ವಾಹನಗಳಿಗೆ ಫಾಸ್ಟ್ಯಾಗ್‌ ಕಡ್ಡಾಯ

ಜನವರಿಯಿಂದ ಎಲ್ಲ ಚತುಷ್ಚಕ್ರ ವಾಹನಗಳಿಗೆ ಫಾಸ್ಟ್ಯಾಗ್‌ ಕಡ್ಡಾಯ


ದಿಲ್ಲಿ, ನ. 8: ನಿಮ್ಮ ಬಳಿ ಕಾರು ಇದೆಯೇ? ಇನ್ನೂ ಫಾಸ್ಟ್ಯಾಗ್‌ ಮಾಡಿಸಿಕೊಂಡಿಲ್ಲವೇ? ಇಗಲೇ ಮಾಡಿಸಿಕೊಳ್ಳಿ. ಮುಂಬರುವ ಜನವರಿಯಿಂದ ಎಲ್ಲ ಚತುಷ್ಚಕ್ರ ವಾಹನಗಳಿಗೆ ಫಾಸ್ಟ್ಯಾಗ್‌ ಕಡ್ಡಾಯವಾಗಲಿದೆ. ಹಳೆ ವಾಹನಗಳಿಗೂ ಇದರಿಂದ ಯಾವುದೇ ವಿನಾಯಿತಿ ಇಲ್ಲ.
ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡುವ ಸಲುವಾಗಿ 2021, ಜ.1ರಿಂದ ಎಲ್ಲ ಚತುಷ್ಚಕ್ರ ವಾಹನಗಳಿಗೆ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿ ಸಾರಿಗೆ ಸಚಿವಾಲಯ ಶನಿವಾರ ಅಧಿಸೂಚನೆ ಹೊರಡಿಸಿದೆ.
2017, ಡಿ.1ರಿಂದ ಮೊದಲು ಮಾರಾಟವಾಗಿರುವ ವಾಹನಗಳೂ ಅರ್ಥಾತ್‌ M ಮತ್ತು N ವರ್ಗದಲ್ಲಿ ಬರುವ ವಾಹನಗಳಿಗೂ ಫಾಸ್ಟ್ಯಾಗ್‌ ಕಡ್ಡಾಯವಾಗಲಿದೆ.2017, ಡಿ.1ರ ಬಳಿಕ ಮಾರಾಟವಾಗಿರುವ ವಾಹನಗಳಿಗೆ ಈಗಾಗಲೇ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಲಾಗಿದೆ.
ಇನ್ನುಮುಂದೆ ಫಾಸ್ಟ್ಯಾಗ್‌ ಇದ್ದರೆ ಮಾತ್ರ ಸಾರಿಗೆ ವಾಹನಗಳಿಗೆ ಫಿಟ್‌ನೆಸ್‌ ಸರ್ಟಿಫಿಕೆಟ್‌ ಸಿಗುತ್ತದೆ. ರಾಷ್ಟ್ರೀಯ ಪರವಾನಿಗೆ ಹೊಂದಿರುವ ವಾಹನಗಳಿಗೆ 2019, ಅ. 1ರಿಂದಲೇ ಈ ನಿಯಮ ಅನ್ವಯಿಸಲಾಗಿತ್ತು. ಇನ್ನು ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌ ಮಾಡಿಸಿಕೊಳ್ಳುವಾಗಲೂ ಫಾಸ್ಟ್ಯಾಗ್‌ ಕಡ್ಡಾಯವಾಗಿ ಇರಬೇಕಾಗುತ್ತದೆ. ಇದಕ್ಕೆ ಅಗತ್ಯವಿರುವ ತಿದ್ದುಪಡಿಗಳನ್ನು ಸರಕಾರ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!