Saturday, September 25, 2021
spot_img
Homeದೇಶಜನಸಾಮಾನ್ಯರು ಕೊರೊನಾ ಲಸಿಕೆಗೆ ಇನ್ನೂ ಒಂದು ವರ್ಷ ಕಾಯಬೇಕು

ಜನಸಾಮಾನ್ಯರು ಕೊರೊನಾ ಲಸಿಕೆಗೆ ಇನ್ನೂ ಒಂದು ವರ್ಷ ಕಾಯಬೇಕು

ದಿಲ್ಲಿ, ನ.8 : ಇನ್ನು ಕೆಲವೇ ತಿಂಗಳಲ್ಲಿ ಕೊರೊನಾ ಲಸಿಕೆ ಬರುತ್ತದೆ, ನಾವು ಅಪಾಯದಿಂದ ಪಾರಾಗುತ್ತೇವೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದರೆ ಏಮ್ಸ್‌ ನಿರ್ದೇಶಕ ಹಾಗೂ ಕೊರೊನಾ ನಿರ್ವಹಣೆ ಕಾರ್ಯಪಡೆಯ ಸದಸ್ಯರಾಗಿರುವ ಡಾ. ರಣದೀಪ್‌ ಗುಲೇರಿಯ ಅವರು ಈ ನಿರೀಕ್ಷೆಗೆ ತಣ್ಣೀರು ಎರಚುವ ಸುದ್ದಿಯೊಂದನ್ನು ನೀಡಿದ್ದಾರೆ.
ಲಸಿಕೆಯೇನೋ 2021ರಲ್ಲಿ ಬರಬಹುದು, ಅದರೆ ಅದು ಜನಸಾಮಾನ್ಯರಿಗೆ ಸಿಗುವುದು 2022 ಕ್ಕೆ ಎಂದಿದ್ದಾರೆ ಡಾ. ಗುಲೇರಿಯ. ಅಂದರೆ ಜನ ಸಾಮಾನ್ಯರು ಕೊರೊನಾದಿಂದ ಪಾರಾಗಲು ಇನ್ನೂ ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಾಯಬೇಕು.
ಮಾರುಕಟ್ಟೆಯಲ್ಲಿ ಜನ ಸಾಮಾನ್ಯರಿಗೆ ಸರಾಗವಾಗಿ ಕೊರೊನಾ ಲಸಿಕೆ ಸಿಗಲು ಒಂದು ವರ್ಷಕ್ಕೂ ಹೆಚ್ಚು ಸಮಯ ತಗಲಬಹುದು ಎಂದಿದ್ದಾರೆ ಡಾ. ಗುಲೇರಿಯ.
ಮುಂದಿನ ವರ್ಷದ ಮಧ್ಯಂತರಕ್ಕಾಗುವಾಗ ಲಸಿಕೆ ಬಂದರೂ ಸರಕಾರ ಅದನ್ನು ಆದ್ಯತೆಯಲ್ಲಿ ವಿತರಿಸಲಿದೆ. ಅಂದರೆ ಮೊದಲ ಸುತ್ತಿನಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ತೀರಾ ಆಗತ್ಯವಿರುವವರಿಗೆ ಲಸಿಕೆ ನೀಡಲಾಗುವುದು. ಈ ಆದ್ಯತಾ ವರ್ಗದಲ್ಲೇ ಸುಮಾರು 25 ಕೋಟಿ ಜನರಿರುತ್ತಾರೆ. ಅನಂತರ ಜನ ಸಾಮಾನ್ಯರಿಗೆ ವಿತರಣೆಯಾಗಲಿದೆ. ಎಲ್ಲ 130 ಕೋಟಿ ಜನರಿಗೆ ಲಸಿಕೆ ಸಿಗುವಾಗ 2022 ಕೊನೆಯಾಗಬಹುದು.
ನಮ್ಮ ದೇಶದ ಜನಸಂಖ್ಯೆ ದೊಡ್ಡದಿರುವುದರಿಂದ ವಿತರಣೆ ಕಷ್ಟವಾಗಲಿದೆ. ಫ್ಲೂ ಅಥವಾ ಇನ್ನಿತರ ಲಸಿಕೆಯಂತೆ ಮಾರುಕಟ್ಟೆಯಲ್ಲಿ ಕೊರೊನಾ ಲಸಿಕೆ ಲಭ್ಯವಾಗಲು ತುಂಬ ಸಮಯ ಬೇಕಾಗಬಹುದು ಎಂದು ಡಾ.ಗುಲೇರಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!