Saturday, September 25, 2021
spot_img
Homeಸ್ಥಳೀಯ ಸುದ್ದಿಸರ್ವರಲ್ಲೂ ಮಿತ್ರ ಭಾವ ಹೊಂದಿರುವ ಮಿತ್ರಪ್ರಭಾ

ಸರ್ವರಲ್ಲೂ ಮಿತ್ರ ಭಾವ ಹೊಂದಿರುವ ಮಿತ್ರಪ್ರಭಾ

ಕಾರ್ಕಳ : ಎಸ್. ವಿ. ಟಿ. ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅವರಿಗೆ ಅವರ ವಿದ್ಯಾರ್ಥಿಗಳು, ಪೂರ್ವ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಸೇರಿ ಅಭಿನಂದಿಸುವ ಮತ್ತು ಸನ್ಮಾನಿಸುವ ಕಾರ್ಯಕ್ರಮ ಕಾರ್ಕಳದ ಹೋಟೆಲ್ ಪ್ರಕಾಶ್‌ ನಲ್ಲಿ ನ.8ರಂದು ಜರುಗಲಿದೆ. ಸಂಜೆ ನಾಲ್ಕು ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿ ಅವರಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ.
ಮಿತ್ರಪ್ರಭಾ ಹೆಗ್ಡೆ ಅವರು ಕನ್ನಡದ ಉಪನ್ಯಾಸಕರು. ಹಿರಿಯಡ್ಕದ ಸಂಸ್ಕಾರವಂತ ಕುಟುಂಬದಲ್ಲಿ ಹುಟ್ಟಿದ ಅವರು ಬಾಲ್ಯದಲ್ಲಿ ಸಾಹಿತ್ಯ, ಸಂಸ್ಕೃತಿಗಳಿಂದ ಪ್ರಭಾವಿತರಾದವರು. ಶಾಸ್ತ್ರೀಯವಾಗಿ ಭರತನಾಟ್ಯ ಅಭ್ಯಾಸ ಮಾಡಿದವರು.
ಮುಂದೆ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಮೂರು ವರ್ಷ ಕೆಲಸ ಮಾಡಿದರು. ನಂತರ ಕಾರ್ಕಳಕ್ಕೆ ಬಂದು ನೆಲೆಸಿದ ಅವರು ಕಾರ್ಕಳದ ಎಸ್. ವಿ. ಟಿ. ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಆಗಿ 12 ವರ್ಷ, ಪ್ರಾಂಶುಪಾಲರಾಗಿ 20 ವರ್ಷ ಸೇವೆ ಸಲ್ಲಿಸಿ ಮೇ 10ರಂದು ಸೇವಾ ನಿವೃತ್ತಿ ಆಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಬರೆಯುವ, ಓದುವ ಅಭ್ಯಾಸ ಬೆಳೆಸಿದ ಅವರು ನೂರಾರು ಯುವ ವಿದ್ಯಾರ್ಥಿಗಳನ್ನು ಬರೆಯಲು, ಓದಲು ಹಚ್ಚಿದರು. ವಿದ್ಯಾರ್ಥಿಗಳು ಬರೆದದ್ದನ್ನು ತಿದ್ದಿ, ತೀಡಿ ಹರಸಿದರು. ಕಾಲೇಜನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಮುನ್ನೆಲೆಗೆ ತಂದರು. ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರ ಬದುಕು ಮತ್ತು ಸಾಹಿತ್ಯ ಎಂಬ ವಿಷಯದ ಮೇಲೆ ಎಂ. ಫಿಲ್ ಪದವಿ ಪಡೆದರು. ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ…ಹೀಗೆ ಹತ್ತಾರು ಹೊಣೆಗಾರಿಕೆಗಳನ್ನು ಯಶಸ್ವಿ ಆಗಿ ನಿರ್ವಹಣೆ ಮಾಡಿದ್ದಾರೆ. ಪಠ್ಯ ಪುಸ್ತಕ ಬರೆದಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. ಗೋಷ್ಠಿ ಅಧ್ಯಕ್ಷತೆ ವಹಿಸಿದ್ದಾರೆ. ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಗೆದ್ದ ಅವರು ಕಾಲೇಜು ಬಿಟ್ಟ ನಂತರವೂ ಅವರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದಾರೆ. ಅವರ ಈ ಸೇವೆಗಳನ್ನು ಗುರುತಿಸಿ ಅವರ ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳು ಸೇರಿ ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಅವರ ಅಭಿಮಾನಿಗಳಿಗೆ ಸ್ವಾಗತವನ್ನು ಕಾರ್ಯಕ್ರಮದ ವ್ಯವಸ್ಥಾಪಕರು ಕೋರಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!