ಕಾರ್ಕಳ: ಕಾರ್ಕಳ ಜೋಡುರಸ್ತೆಯಲ್ಲಿನ ಪೂರ್ಣಿಮಾ ಸಿಲ್ಕ್ಸ್ ವಾರ್ಷಿಕೋತ್ಸವದ ಅಂಗವಾಗಿ ಮುಕ್ತ ವಾಹಿನಿಯ ಸಹಯೋಗದೊಂದಿಗೆ ನ. 8ರಂದು ಪೂರ್ಣಿಮೋತ್ಸವ ನಡೆಯಲಿದೆ. ಪೂರ್ಣಿಮಾ ಸಿಲ್ಕ್ಸ್ ಸಂಕೀರ್ಣದಲ್ಲಿ ಬೆಳಿಗ್ಗೆ 10 ಗಂಟೆಗೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಮಿಸ್ ಪೂರ್ಣಿಮಾ
ಕಾರ್ಯಕ್ರಮದಂಗವಾಗಿ 16ರಿಂದ 25ವರ್ಷದ ಯುವತಿಯರಿಗೆ ಮಿಸ್ ಪೂರ್ಣಿಮಾ ಹಾಗೂ 25ರಿಂದ 45ವರ್ಷದವರೆಗೆ ಮಿಸ್ಸಸ್ ಪೂರ್ಣಿಮಾ ಸಾಂಪ್ರದಾಯಿಕ ಶೈಲಿಯ ಸೌಂದರ್ಯ ಸ್ಪರ್ಧೆ, ಆದರ್ಶ ದಂಪತಿ ಕಾರ್ಯಕ್ರಮ ನಡೆಯಲಿದೆ. ಮಕ್ಕಳಿಗೆ ಹಾಗೂ ಪುರುಷರಿಗೆ ಗೇಮ್ ಇವೆಂಟ್ ನಡೆಯಲಿದ್ದು ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದವರಿಗೆ ಪೂರ್ಣಿಮಾ ಡಿಸ್ಕೌಂಟ್ ಕೂಪನ್ ನೀಡಲಾಗುವುದು. ನ. 6 ರಿಜಿಸ್ಟ್ರೇಶನ್ಗೆ ಕೊನೆಯ ದಿನಾಂಕವಾಗಿದ್ದು, 7022596666 ನಂಬರ್ ಸಂಪರ್ಕಿಸುವಂತೆ ಪೂರ್ಣಿಮಾ ಸಿಲ್ಕ್ಸ್ ಜೋಡುರಸ್ತೆ ಆಡಳಿತ ನಿರ್ದೇಶಕ ರವಿಪ್ರಕಾಶ್ ಪ್ರಭು ಪ್ರಕಟನೆಯಲ್ಲಿ ತಿಳಿಸಿದ್ದಾರೆ.