Homeರಾಜ್ಯಶಾಲೆ ಆರಂಭಿಸಲು ಅವಸರದ ನಿರ್ಧಾರವಿಲ್ಲ : ಸುರೇಶ್‌ ಕುಮಾರ್‌

Related Posts

ಶಾಲೆ ಆರಂಭಿಸಲು ಅವಸರದ ನಿರ್ಧಾರವಿಲ್ಲ : ಸುರೇಶ್‌ ಕುಮಾರ್‌

ಬೆಂಗಳೂರು, ನ.5 : ಶಾಲೆ ಪುನರಾರಂಭ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ನಾಲ್ಕೈದು ದಿನಗಳಲ್ಲಿ ಮಾತುಕತೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಶಾಲೆ, ಪಿಯು ಕಾಲೇಜು ಆರಂಭ ಬಗ್ಗೆ ತರಾತುರಿ ಮಾಡದೆ, ಸಂಬಂಧಿಸಿದ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಶಾಲೆ ಆರಂಭಿಸಿರುವ ರಾಜ್ಯಗಳಲ್ಲಿನ ಪರಿಣಾಮ ಅವಲೋಕಿಸಿ ನಿರ್ಧರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಮಕ್ಕಳ ಹಕ್ಕು ಮತ್ತು ಅವರ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದರೂ ವಿದ್ಯಾರ್ಥಿಗಳನ್ನು ದೀರ್ಘಕಾಲದವರೆಗೆ ಕಲಿಕೆಯ ಪ್ರಕ್ರಿಯೆಗಳಿಂದ ದೂರವಿಡದಿರುವ ಬಗ್ಗೆ ಯೋಚಿಸುವುದು ಸಹ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ಸರ್ಕಾರ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ.
ಶಾಲೆಗಳನ್ನು ಪುನರಾರಂಭಿಸುವ ಕುರಿತು ಈಗಾಗಲೇ ಸುರೇಶ್ ಕುಮಾರ್ ಅವರು, ಹಲವಾರು ಚರ್ಚೆಗಳನ್ನು ನಡೆಸಿದ್ದಾರೆ, ಆದರೆ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಿರುವ ಸುರೇಶ್ ಕುಮಾರ್ ಅವರು ನಂತರ ಅಂತಿನ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಮುಂದಿನ ಎರಡು ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಸಾರಿಗೆ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು, ಶಾಲಾ ಅಭಿವೃದ್ಧಿ ಮತ್ತು ಮಾನಿಟರಿಂಗ್ ಸಮಿತಿಯ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಸುರೇಶ್ ಕುಮಾರ್ ಅವರು ಚರ್ಚೆ ನಡೆಸಲಿದ್ದಾರೆ. ಅನಂತರವೇ ಪುನರಾರಂಭ ಕುರಿತು ನಿರ್ಧಾರ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!