Homeಸ್ಥಳೀಯ ಸುದ್ದಿಪೊಲೀಸ್‌ ಠಾಣೆಯಲ್ಲಿ ಕೊರೊನಾ ಜಾಗೃತಿ ಕುರಿತು ಕರಪತ್ರ ಬಿಡುಗಡೆ

Related Posts

ಪೊಲೀಸ್‌ ಠಾಣೆಯಲ್ಲಿ ಕೊರೊನಾ ಜಾಗೃತಿ ಕುರಿತು ಕರಪತ್ರ ಬಿಡುಗಡೆ

ಕಾರ್ಕಳ : ಕಾರ್ಕಳ ಪೊಲೀಸ್‌ ಠಾಣೆ, ರೋಟರಿ ಆನ್ಸ್, ರೋಟರಾಕ್ಟ್ ಸಂಸ್ಥೆ ಕಾರ್ಕಳ ಆಶ್ರಯದಲ್ಲಿ ನ. 5ರಂದು ಪೊಲೀಸ್‌ ಠಾಣೆಯಲ್ಲಿ ಕೊರೋನದ ಮುನ್ನೆಚ್ಚರಿಕೆ ಕರಪತ್ರ ಹಾಗೂ ಮಾಸ್ಕ್‌ ಕಡ್ಡಾಯ ಸ್ಟಿಕ್ಕರ್‌ ಅನ್ನು ಬಿಡುಗಡೆ ಮಾಡಲಾಯಿತು.

ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದು, ನಗರ ಠಾಣೆ ಅಪರಾಧ ವಿಭಾಗದ ಎಸ್‌ಐ ದಾಮೋದರ್, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ ನಾಸಿರ್ ಹುಸೇನ್, ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ, ರೋಟರ್ಯಾಕ್ಟ್ ಅಧ್ಯಕ್ಷ ರಾಹುಲ್ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನ್ಸ್ ಕಾರ್ಯದರ್ಶಿ ಸುಮಾ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಗೌಡ ವಂದಿಸಿದರು. ರೋಟರಿಯ ಬಾಲಕೃಷ್ಣ, ಪ್ರಶಾಂತ್, ಸಮೀರ್ ಉಪಸ್ಥಿತರಿದ್ದರು. ಬಳಿಕ ಕಾರ್ಕಳದ ಬಸ್ ಸ್ಟ್ಯಾಂಡ್, ಜೋಡುರಸ್ತೆ, ಬಂಡಿಮಠ ಪರಿಸರದಲ್ಲಿ ವಾಹನಗಳಿಗೆ ಸ್ಟಿಕ್ಕರ್‌ ಅಂಟಿಸಲಾಯಿತು. ಕರಪತ್ರ ವಿತರಿಸಲಾಯಿತು.

LEAVE A REPLY

Please enter your comment!
Please enter your name here

Latest Posts

error: Content is protected !!