ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಇಂದು ಮುಂಬೈ ಮತ್ತು ಡೆಲ್ಲಿ ಮುಖಾಮುಖಿ ಆಗಲಿವೆ. ಟಾಪ್ ಒಂದು ಮತ್ತು ಎರಡು ಸ್ಥಾನ ಪಡೆದ ತಂಡಗಳ ಮುಖಾಮುಖಿ ಇದು. ಹೊರನೋಟಕ್ಕೆ ಮುಂಬೈ ಬಲಿಷ್ಟ ತಂಡವೇ ಹೌದು. ಆದರೆ ಎರಡು ದಿನಗಳ ಹಿಂದೆ ಇದೇ ಮುಂಬೈ ತಂಡವನ್ನು ಹೈದರಾಬಾದ್ ತಂಡವು ಹತ್ತು ವಿಕೆಟ್ ಅಂತರದಲ್ಲಿ ಸೋಲಿಸಿದ್ದನ್ನು ಮರೆಯುವುದು ಹೇಗೆ? ಡೆಲ್ಲಿ ತಂಡದಲ್ಲಿ ಕೂಡ ಬಲಿಷ್ಟ ಆಟಗಾರರು ಇದ್ದಾರೆ. ಸ್ವತಃ ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ಮುಂಬೈಯಲ್ಲಿ ರೋಹಿತ್ ಶರ್ಮಾ ಫಾರ್ಮ್ ಇಲ್ಲದೆ ಒದ್ದಾಡುತ್ತಿದ್ದಾರೆ. ಆದರೆ ಪಾಂಡ್ಯ ಸಹೋದರರು, ಇಶಾನ್ ಕಿಶನ್, ಪೊಲಾರ್ಡ್ ವೇಗವನ್ನು ಕಟ್ಟಿ ಹಾಕುವುದು ಕಷ್ಟ. ಬುಮ್ರಾ ಪರಿಣಾಮಕಾರಿ ಆಗುತ್ತಿದ್ದಾರೆ. ಗೆದ್ದ ತಂಡವು ನೇರವಾಗಿ ಫೈನಲ್ ಪ್ರವೇಶ ಪಡೆಯುತ್ತದೆ. ಸೋತ ತಂಡಕ್ಕೆ ಇನ್ನೊಂದು ಅವಕಾಶ ಖಂಡಿತ ಇದೆ. ಗೆಲ್ಲೋದು ಯಾರು ಎಂದು ತಿಳಿಯಲು ಇಂದು ರಾತ್ರಿ ವರೆಗೆ ಕಾಯಬೇಕು.