Homeಅಂಕಣರಾಜಕೀಯ ಪಡಸಾಲೆ: ಸಂವಿಧಾನದಲ್ಲಿಯೇ ಇಲ್ಲದ ಹುದ್ದೆಗೆ ಎಷ್ಟೊಂದು ಪೈಪೋಟಿ?

Related Posts

ರಾಜಕೀಯ ಪಡಸಾಲೆ: ಸಂವಿಧಾನದಲ್ಲಿಯೇ ಇಲ್ಲದ ಹುದ್ದೆಗೆ ಎಷ್ಟೊಂದು ಪೈಪೋಟಿ?

ಸಂಸದೀಯ ಸರಕಾರದ ರಾಜಕೀಯ ಕಾರ್ಯಾಂಗದಲ್ಲಿ ಕೆಲವೊಂದು ಹುದ್ದೆಗಳು ಸಂವಿಧಾನದ ಚೌಕಟ್ಟಿನಲ್ಲಿಯೇ ಅಲಂಕೃವಾಗಿರುತ್ತವೆ. ಇದರ ಜೊತೆಗೆ ಕೆಲವೊಂದು ರಾಜಕೀಯ ಸ್ಥಾನಮಾನದ ಹುದ್ದೆಗಳು ಸಮಯ;ಸಂದಭ೯ದ ಅನುಕೂಲಕ್ಕಾಗಿ ಹುಟ್ಟಿಕೊಂಡಿರುತ್ತವೆ.ಹೊರ ನೋಟಕ್ಕೆ ಜನ ಸಾಮಾನ್ಯರಿಗೆ ಅವುಗಳೆಲ್ಲವೂ ಏಕ ಪ್ರಕಾರವಾಗಿಯೇ ಕಾಣಿಸುತ್ತವೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಸಂವಿಧಾನದಲ್ಲಿ ಕಾಣದ ಕಾನೂನು ಬದ್ಧವಾಗಿ ಹುಟ್ಟಿಕೊಳ್ಳದ ಹುದ್ದೆಗಳ ಮೇಲೆ ಹೆಚ್ಚಿನ ಕಣ್ಣು ಹಾಗೂ ಪೈಪೋಟಿ ಇರುವುದು ಆಶ್ಚರ್ಯವಾದರೂ ಸತ್ಯ.
ಹಾಗಾದರೆ ಈ ಮೂರು ಪದನಾಮದ ಹುದ್ದೆಗಳು ಯಾವುದು ಅನ್ನುವುದನ್ನು ಇಂದಿನ ರಾಜಕೀಯ ಪಡಸಾಲೆಯಲ್ಲಿ ಕೂತು ಚಚೆ೯ ಮಾಡೋಣ.ಮಾತ್ರವಲ್ಲ ಇವುಗಳ ಅಗತ್ಯ ಎಷ್ಟಿದೆ ಅನ್ನುವುದನ್ನು ವಿಮಶಿ೯ಸ ಬೇಕಾಗಿದೆ.
1.”ಕ್ಯಾಬಿನೆಟ್”: ನಮ್ಮ ಸಂವಿಧಾನದಲ್ಲಿ ಎಲ್ಲಿ ಕೂಡಾ ಕ್ಯಾಬಿನೆಟ್ ಎಂಬ ಪದ ಬಳಕೆ ಮಾಡಿಯೇ ಇಲ್ಲ.ಇದರ ಬದಲಿಗೆ”ಕೌನ್ಸಿಲ್‌ ಆಫ್ ಮಿನಿಸ್ಟರ್ಸ್”ಅಥಾ೯ತ್ ಸಚಿವ ಸಂಪುಟ ಅನ್ನುವ ಪದ ಬಳಕೆ ಮಾಡಿದ್ದಾರೆ.ನಮ್ಮ ಸಂವಿಧಾನದಲ್ಲಿಯೇ ಉಲ್ಲೇಖಿಸಿರುವಂತೆ‌ “There shall be a council of ministers to give aid & advice to the President/Governer.”ಅಂತಿದೆ.ಹಾಗಾಗಿ ಕ್ಯಾಬಿನೆಟ್ ಎಂಬ ಪದ ರೂಢಿಯಲ್ಲಿದೆ ಹೊರತು ಸಂವಿಧಾನದಲ್ಲಿ ಲಿಖಿತವಾಗಿ ಇಲ್ಲ.ಆದರೂ ಕ್ಯಾಬಿನೆಟ್ ದಜೆ೯ಸಚಿವಗಿರಿಗೆ ಎಷ್ಟೊಂದು ಸೆಣಸಾಟ, ಲಾಬಿ, ಒತ್ತಡಗಳು? ಇವೆಲ್ಲವೂ ನಮ್ಮ ಆಡಳಿತದ ಅನುಕೂಲಕ್ಕಾಗಿ ಮಾಡಿಕೊಂಡ ವಗೀ೯ಕರಣ ಅಷ್ಟೇ “
2.ಉಪ ಮುಖ್ಯಮಂತ್ರಿ: “ಇದು ಇನ್ನೊಂದು ಸಂವಿಧಾನದ ಹೊರಗೆ ಹುಟ್ಟಿಕೊಂಡ ಪದ ನಾಮ.ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಕೂಡಾ ಉಪಪ್ರಧಾನಿ /ಉಪ ಮುಖ್ಯಮಂತ್ರಿ ಅನ್ನುವ ಹುದ್ದೆಯೇ ಇಲ್ಲ.ಇದು ಆಯಾಯ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ತಮ್ಮ ಅನುಕೂಲಕ್ಕಾಗಿಮಾಡಿಕೊಂಡ ಅನುಕೂಲ ಶಾಸ್ತ್ರ.
ಸರಿಸಮಾನವಾದ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ಪ್ರಧಾನಿ/ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಿದ್ದಾಗ ಅವರನ್ನು ತೃಪ್ತಿಪಡಿಸಿ ಸರಕಾರಕ್ಕೆ ಸ್ಥಿರತೆ ನೀಡುವ ದೃಷ್ಟಿಯಿಂದ ಮಾಡಿಕೊಂಡ ಹುದ್ದೆಗಳೇ ಹೊರತು ಕಾನೂನಿನ ನೆಲೆಯಲ್ಲಿ ಅವುಗಳಿಗೆ ಯಾವುದೇ ಮಹತ್ವ ಇಲ್ಲ.ಸಮ್ಮಿಶ್ರ ಸರಕಾರದ ಕಾಲದಲ್ಲಂತೂ ಈ ಹುದ್ದೆಗೆ ವಿಪರೀತ ಬೇಡಿಕೆ ಬಂದಿದೆ.ಇಂದು ಈ ಹುದ್ದೆಗಾಗಿಯೇ ಎಷ್ಟೊಂದು ಘಷ೯ಣೆ, ವೈಮನಸ್ಸು? ಯಾವುದೋ ಒಂದು ಖಾತೆಯ ಜವಾಬ್ದಾರಿ ಹೊತ್ತ ಸಚಿವನಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಾಗ ಖಾತೆಗಳು ಹೆಚ್ಚಾಗುವುದಿಲ್ಲ. ಜವಾಬ್ದಾರಿಯೂ ಹೆಚ್ಚಾಗುವುದಿಲ್ಲ; ಬದಲಾಗಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ತಾನೂ ಒಬ್ಬ ಪಯಾ೯ಯ ವ್ಯಕ್ತಿ ಅನ್ನುವ “ಅಹಂ”ಕಾರ ಪ್ರಾಪ್ತವಾಗಲೂ ಮಾಡಿಕೊಂಡಿರುವ ಸುಲಭ ದಾರಿ ಅಷ್ಟೇ. ಪಕ್ಷದೊಳಗಿನ ಜಗಳ ಬಿಡಿಸಲು ಅಥವಾ ಜಗಳ ಹೆಚ್ಚಿಸಲು ಮಾಡಿಕೊಂಡ ಸ್ವಯಂಕೃತ ದಾರಿ ಅನ್ನುವುದು ಇತ್ತೀಚಿನ ಕನಾ೯ಟಕದ ರಾಜಕೀಯ ವಿದ್ಯಮಾನದಲ್ಲಿ ಕಾಣುವ ವಿಲಕ್ಷಣವೂ ಹೌದು.
3.”ಉಸ್ತುವಾರಿ “: ಇದು ರಾಜ್ಯ ಮಟ್ಟದಲ್ಲಿ ಮಾಡಿಕೊಂಡ ಇನ್ನೊಂದು ಸಂವಿಧಾನೇತರ ಹುದ್ದೆ.ಈ ಒಂದು ಹೆಚ್ಚು” ವರಿ”ಮಾಡುವ ಉಸ್ತುವಾರಿ ಸಚಿವ ಸ್ಥಾನ. 80 ಮತ್ತು 90ರ ದಶಕದಲ್ಲಿ ಹುಟ್ಟಿ ಕೊಂಡ ಹೊಸ ಪ್ರಯೋಗ.ಇದರ ಮುಖ್ಯ ಉದ್ದೇಶ ಆಯಾಯ ಜಿಲ್ಲೆಗಳನ್ನು ಪ್ರತಿನಿಧಿಸುವ ಸಚಿವರು ತಮ್ಮ ತಮ್ಮ ಜಿಲ್ಲೆಯ ಸರ್ವಾಂಗೀಣ ಆಡಳಿತದ ಮೇಲುಸ್ತುವಾರಿ ಮಾಡಿದರೆ ಜಿಲ್ಲಾ ಆಡಳಿತದ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಮೂಡಿ ಬರುತ್ತದೆ ಎಂಬುದು ಮೂಲ ಉದ್ದೇಶ.ಆದರೆ ಇದರ ಪರಿಣಾಮ ಇಂದು ಏನಾಗಿದೆ ಅಂದರೆ ಕೆಲವೊಂದು ಸಚಿವರಿಗೆ ತಮ್ಮ ಖಾತೆಗಳ ಹೆಸರೇ ಮರೆತು ಹೋಗುವ ಪರಿಸ್ಥಿತಿ ಬಂದಿದೆ.ಯಾವುದೇ ಒಂದು ಖಾತೆಯ ಸಚಿವ ಅಂದ ಮೇಲೆ ಆತನ ಇಡೀ ಜವಾಬ್ದಾರಿ ರಾಜ್ಯಕ್ಕೆ ಅನ್ವಯಿಸುತ್ತದೆ.ಇಂದು ಪರಿಸ್ಥಿತಿ ಏನಾಗಿದೆ ಅಂದರೆ ಬೆಂಗಳೂರಿನ ವ್ಯಕ್ತಿಗೆ ನಿಮ್ಮ ಗೃಹ ಸಚಿವರು ಯಾರು ಎಂದು ಕೇಳಿದರೆ ಗೊತ್ತಾಗದ ಸ್ಥಿತಿ. ಹೆಚ್ಚಿನ ಉಸ್ತುವಾರಿ ಸಚಿವರುಗಳು ತಮ್ಮ ಜಿಲ್ಲೆಯಲ್ಲಿಯೇ ಗೂಟ ಹೊಡೆದು ಕೂರುತ್ತಾರೆ.ಯಾಕೆಂದರೆ ಹೆಚ್ಚು ಪರಿಚಿತರು ಗೌರವ ಸಿಗಬೇಕಾದರೆ ತಮ್ಮ ಊರೇ ಆಗಬೇಕು.ರಾಜಧಾನಿಯ ತಮ್ಮ ಕಚೇರಿಯಲ್ಲಾಗಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ತಮ್ಮ ಖಾತೆಯ ಸ್ಥಿತಿಗತಿಯನ್ನು ಅವಲೋಕಿಸುವುದನ್ನೇ ಮರೆತು ಬಿಡುವ ಪರಿಸ್ಥಿತಿ.ಅನುದಾನ ತರುವಾಗಲೂ ಕೂಡಾ ತಮ್ಮ ಖಾತೆಯ ಕುರಿತು ಒತ್ತಡ ಹಾಕದೇ ತಮ್ಮ ಜಿಲ್ಲೆಯ ಅಭಿವೃದ್ಧಿಗೆ ಅನುದಾನಕ್ಕಾಗಿ ಹೆಚ್ಚಿನ ಬೇಡಿಕೆ ಮಂಡಿಸುವ ಮನಃಸ್ಥಿತಿ.ಯಾಕೆಂದರೆ ತಾವು ಮುಂದೆ ಸ್ಪಧಿ೯ಸಬೇಕಾಗಿರುವುದು ಅದೇ ಜಿಲ್ಲೆಯ ಯಾವುದೋ ಒಂದು ಕ್ಷೇತ್ರದಲ್ಲಿ.ಇದೇ ಪರಿಸ್ಥಿತಿ ಮುಂದುವರಿದರೆ ಖಾತೆಯನ್ನು ಆಧರಿಸಿ ಸಚಿವ ಸ್ಥಾನ ಕೊಡುವದಕ್ಕಿಂತ ಜಿಲ್ಲೆಗೊಬ್ಬ ಸಚಿವ ಎಂದು ನೇಮಕ ಮಾಡುವ ಕಾಲ ಬಂದರೂ ಆಶ್ಚರ್ಯವಿಲ್ಲ.
ಸಂವಿಧಾನದ ಒಳಗೆ ಮತ್ತು ಹೊರಗೆ ಈ ಮೂರು ಅನುಕೂಲ ಶಾಸ್ತ್ರದ ಹುದ್ದೆಗಳ ಅಗತ್ಯ ಪಾವಿತ್ರ್ಯದ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕಾದ ಕಾಲ ಕೂಡಿ ಬಂದಿದೆ ಅನ್ನುವುದು ನನ್ನ ಬಲವಾದ ಒತ್ತಾಸೆಯೂ ಹೌದು.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

Latest Posts

error: Content is protected !!