Homeಕ್ರೀಡೆಆರ್‌ಸಿಬಿ ತಂಡ ಪ್ಲೇ ಆಫ್ ಸುತ್ತಿಗೆ

Related Posts

ಆರ್‌ಸಿಬಿ ತಂಡ ಪ್ಲೇ ಆಫ್ ಸುತ್ತಿಗೆ

ಕಾರ್ಕಳ : ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಡೆಲ್ಲಿ ತಂಡದ ವಿರದ್ಧ 5 ವಿಕೆಟ್ ಅಂತರದಲ್ಲಿ ಸೋತಿದ್ದರೂ ಉತ್ತಮ ರನ್ ಧಾರಣೆ ಹೊಂದಿರುವುದರಿಂದ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದಿದೆ. ಮುಂಬೈ ಮತ್ತು ಡೆಲ್ಲಿ ತಂಡಗಳು ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದು, ಆರ್‌ಸಿಬಿ ಮೂರನೆಯ ಸ್ಥಾನದಲ್ಲಿದೆ. ನಾಲ್ಕನೆಯ ತಂಡ ಯಾವುದು ಎಂದು ಇಂದಿನ ಪಂದ್ಯದ ಅಂತ್ಯಕ್ಕೆ ಖಚಿತವಾಗಲಿದೆ. ಐಪಿಲ್ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಂತೆ ಆರ್‌ಸಿಬಿ ತಂಡದ ಒಂದೊಂದೇ ಹುಳುಕುಗಳು ಹೊರಬರುತ್ತಿವೆ. ಕೊಹ್ಲಿ ಕ್ಯಾಪ್ಟನ್ ಆಗಿ ಫೇಲ್ ಆಗುತ್ತಿದ್ದಾರೆ. ಪಡಿಕ್ಕಲ್ ಮತ್ತು ಎಬಿಡಿ ಬಿಟ್ಟರೆ ಬೇರೆ ಯಾರ ಮೇಲೂ ಭರವಸೆಯಿಡುವಂತಿಲ್ಲ. ಸ್ವತಃ ಕೊಹ್ಲಿ ಬ್ಯಾಟ್ ಕೈಕೊಡುತ್ತಿದೆ. ಮಿಡ್ಲ್ ಆರ್ಡರ್ ದೇವರೇ ಕಾಪಾಡಬೇಕು. ಬೌಲರಗಳದ್ದು ಅದೇ ರಾಗ, ಅದೇ ಹಾಡು ಎಂಬಂತೆ ಆಗಿದೆ. ತಪ್ಪುಗಳನ್ನು ಸರಿ ಪಡಿಸಿಕೊಂಡು ಉತ್ತಮ ನಿರ್ವಹಣೆ ತೋರಿದರೆ ಆರ್‌ಸಿಬಿ ತಂಡದ 13 ವರ್ಷಗಳ ಕೊರತೆ ಈ ಬಾರಿ ನೀಗಬಹುದು.

LEAVE A REPLY

Please enter your comment!
Please enter your name here

Latest Posts

error: Content is protected !!