Homeಸ್ಥಳೀಯ ಸುದ್ದಿತಾಂತ್ರಿಕ ಬೆಳವಣಿಗೆಯೊಂದಿಗೆ ಪರಿಸರದ ಕುರಿತು ಕಾಳಜಿ ಅಗತ್ಯ : ಡಾ. ಅಬ್ದುಲ್‌ ಶರೀಫ್‌

Related Posts

ತಾಂತ್ರಿಕ ಬೆಳವಣಿಗೆಯೊಂದಿಗೆ ಪರಿಸರದ ಕುರಿತು ಕಾಳಜಿ ಅಗತ್ಯ : ಡಾ. ಅಬ್ದುಲ್‌ ಶರೀಫ್‌

ಕಾರ್ಕಳ : ತಾಂತ್ರಿಕ ಬೆಳವಣಿಗೆಯೊಂದಿಗೆ ನಮ್ಮ ಪರಿಸರದ ಕುರಿತು ಕಾಳಜಿ ಅಗತ್ಯ. ಈ ನಿಟ್ಟಿನಲ್ಲಿ ಯುವಜನತೆ ಕಾರ್ಯೋನ್ಮುಖರಾಗಬೇಕೆಂದು ಎಂದು ಮಂಗಳೂರಿನ ಪಿ.ಎ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಕಾಡೆಮಿಕ್ ಸೆನೇಟ್ ಮೆಂಬರ್ ಡಾ. ಅಬ್ದುಲ್ ಶರೀಫ್ ಅಭಿಪ್ರಾಯಪಟ್ಟರು.

ಅವರು ಅ. 31ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 2019-2020 ನೇ ಶೈಕ್ಷಣಿಕ ಸಾಲಿನ ಪದವಿಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಯುವಜನತೆ ನಿರಂತರ ಕಲಿಕೆಯೊಂದಿಗೆ ಹೊಸ ಸವಾಲುಗಳನ್ನು ಎದರಿಸಲು ಸಿದ್ಧರಾಗಬೇಕಿದೆ. ತಂತ್ರಜ್ಞಾನದ ಸದ್ಬಳಕೆ ಮಾಡಿದಲ್ಲಿ ಹೊಸ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಿದೆ ಎಂದವರು ಹೇಳಿದರು.

ಸಾಮಾಜಿಕ ಭದ್ರತೆ ಅಗತ್ಯ

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಎಜುಕೇಶನ್ ಟ್ರಸ್ಟ್‌ ನ ಟ್ರಸ್ಟೀ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ವಿಶಾಲ್ ಹೆಗ್ಡೆ, ಪ್ರತಿಯೋರ್ವ ಮಾನವನಿಗೂ ಸಾಮಾಜಿಕ ಬದ್ಧತೆ ಅಗತ್ಯ. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕತೆಯೊಂದಿಗೆ ಮತ್ತೊಬ್ಬರ ಚಿಂತನೆಗಳ ಆಲಿಸುವಿಕೆಯೂ ಮುಖ್ಯವೆಂದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್‍ಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಬಿ.ಇ, ಎಂ.ಟೆಕ್ ಹಾಗೂ ಎಂ.ಸಿ.ಎ. ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಡಿಗ್ರಿ ಪ್ರದಾನ ಮಾಡಲಾಯಿತು.

ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ಶರಣ್ಯಾ ವಿ. ನಾಯಕ್, ಸಿವಿಲ್ ವಿಭಾಗದ ಬಿ.ಎಸ್. ಪ್ರಾರ್ಥನಾ, ಕಂಪ್ಯೂಟರ್‍ಸೈನ್ಸ್‍ನ ಸಂಜನಾ ನಂಬಿಯಾರ್, ಇಲೆಕ್ಟ್ರಾನಿಕ್ಸ್ ವಿಭಾಗದ ಶ್ರೇಯ, ಇಲೆಕ್ಟ್ರಿಕಲ್ ವಿಭಾಗದ ಅನೂಪ್ ಶೆಟ್ಟಿ, ಇನ್ಫೋಮೇಶನ್‍ ಸೈನ್ಸ್‌ ನ ದೀಪಶ್ರೀ ಎಸ್, ಮೆಕ್ಯಾನಿಕಲ್ ವಿಭಾಗದ ಹರ್ಷಿತ್ ಕುಮಾರ್, ಎಂ.ಟೆಕ್ ವಿಭಾಗದಲ್ಲಿ ವಿಭಾ, ಮೇಘ ಮಯೂರಿ, ರಕ್ಷಿತ್, ಸುಖದಾ ಚೊಕ್ಕಾಡಿ, ನೀತಾ ಜೆನಿಸ್, ರಚನಾ ಪಿ, ಲಿಖಿತಾಶ್ರೀದೇವಿ, ಶ್ರವಣ್ ಕುಮಾರ್ ಎಂ., ನಾಗೇಶ್ ಕುಡ್ವ ಹಾಗೂ ಎಂ.ಸಿ.ಎ. ವಿಭಾಗದ ಕಾವ್ಯಶ್ರೀ ಆರ್. ಭಟ್ ಚಿನ್ನದ ಪದಕ ಪಡೆದರು. ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ದೀಕ್ಷಾ ಆರ್., ಸಿವಿಲ್ ವಿಭಾಗದ ಪೃಥ್ವಿರಾಜ್ ಅರುಣ್ ಕುಲಕರ್ಣಿ, ಕಂಪ್ಯೂಟರ್‍ಸೈನ್ಸ್‍ನ ಅಕ್ಷತಾ ವಿ. ಭಟ್, ಇಲೆಕ್ಟ್ರಾನಿಕ್ಸ್ ವಿಭಾಗದ ಡೈಸಿ ಶೀತಲ್, ಇಲೆಕ್ಟ್ರಿಕಲ್ ವಿಭಾಗದ ಪುನೀತ್ ಶೆಟ್ಟಿಗಾರ್, ಇನ್ಫೋಮೇಶನ್‍ಸೈನ್ಸ್‍ನ ಸತ್ಯಭಾಮ ಎಂ. ಪ್ರಭು, ಮೆಕ್ಯಾನಿಕಲ್ ವಿಭಾಗದ ಸಾಕೇತ್ ಕುಕ್ಕಿಲ್ಲಾಯ, ಮತ್ತು ಎಂ.ಟೆಕ್ ವಿಭಾಗದಲ್ಲಿ ಅಸ್ಮಿತಾ ಎನ್.ಎಂ, ಮೋಕ್ಷಿತಾ ಎಂ, ಅಶ್ವಿತಾ ದಾಂತಿಸ್, ಜಯಶ್ರೀ ಎ, ರಖೀಬಾತನೀಮ್, ಆಕಾಶ್ ಕಜವ ಹಾಗೂ ಎಂ.ಸಿ.ಎ ವಿಭಾಗದ ಕ್ರಿಸ್ಟೀನಾ ಶಿಲ್ಪಾ ಬೆಳ್ಳಿ ಪದಕಗಳಿಸಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್‌ ಸ್ವಾಗತಿಸಿ, ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಮೆಲ್ವಿನ್ ಕಾರ್ಯಕ್ರಮ ನಿರೂಪಿಸಿದರು. ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಡಾ. ಶ್ರೀನಿವಾಸ್ ಪೈ ವಂದಿಸಿದರು.

LEAVE A REPLY

Please enter your comment!
Please enter your name here

Latest Posts

error: Content is protected !!