Wednesday, October 27, 2021
spot_img
Homeರಾಜ್ಯಕರ್ನಾಟಕದಲ್ಲಿ ಜಾರಿಯಾಗಲಿದೆ ಲವ್‌ ಜೆಹಾದ್‌ ವಿರುದ್ಧ ಕಠಿಣ ಕಾನೂನು

ಕರ್ನಾಟಕದಲ್ಲಿ ಜಾರಿಯಾಗಲಿದೆ ಲವ್‌ ಜೆಹಾದ್‌ ವಿರುದ್ಧ ಕಠಿಣ ಕಾನೂನು

ಬೆಂಗಳೂರು, ನ.3 : ಉತ್ತರ ಪ್ರದೇಶದ ಬಳಿಕ ಕರ್ನಾಟಕವೂ ಲವ್‌ ಜೆಹಾದ್‌ ವಿರುದ್ಧ ಕಾನೂನು ತರಲು ಮುಂದಾಗಿದೆ. ಮದುವೆಯಾಗುವ ಉದ್ದೇಶದಿಂದ ಮಾತ್ರ ಮತಾಂತರ ಮಾಡುವುದನ್ನು ನಿಷೇಧಿಸುವ ಕಾನೂನು ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಜೆಹಾದಿಗಳು ರಸ್ತೆಗಳಲ್ಲಿ ನಮ್ಮ ಸಹೋದರಿಯರ ಮಾನ ಹರಾಜು ಹಾಕುವುದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಇತ್ತೀಚೆಗೆ ಅಲಹಬಾದ್‌ ಹೈಕೋರ್ಟ್‌ ನೀಡಿದ ತೀರ್ಪಿನ ಅನುಸಾರ ಮದುವೆಗಾಗಿ ಮತಾಂತರವಾಗುವುದನ್ನು ತಡೆಯುವ ಕಾನೂನನ್ನು ಜಾರಿಗೆ ತರಲಿದ್ದೇವೆ ಎಂದು ಹೇಳಿದ್ದಾರೆ.
ಅಲಹಬಾದ್‌ ಹೈಕೋರ್ಟ್‌ ಅ.31ರಂದು ನೀಡಿದ ಮಹತ್ವದ ತೀರ್ಪೊಂದರಲ್ಲಿ ಮದುವೆಯಾಗುವ ಏಕೈಕ ಉದ್ದೇಶದಿಂದಮಾಡಿಕೊಳ್ಳುವ ಮತಾಂತರ ಸಿಂಧುವಾಗುವುದಿಲ್ಲ ಎಂದು ಹೇಳಿದೆ. ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮತಾಂತರದ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಬಿಜೆಪಿ ಆಡಳಿತವಿರುವ ಹರ್ಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳು ಲವ್‌ ಜೆಹಾದ್‌ ವಿರುದ್ಧ ಕಾಯಿದೆ ರಚಿಸುವ ಘೋಷಣೆ ಮಾಡಿವೆ. ಈ ಸಾಲಿಗೆ ಈಗ ಕರ್ನಾಟಕ ಸೇರಿದೆ.
ಲವ್‌ ಜೆಹಾದ್‌ ಕೃತ್ಯದಲ್ಲಿ ತೊಡಗಿರುವವರು ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ. ಅತ್ಯಂತ ಕಠಿಣವಾದ ಕಾಯಿದೆಯನ್ನು ನಾವು ರಚಿಸಲಿದ್ದೇವೆ ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ರವಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!