Homeಸ್ಥಳೀಯ ಸುದ್ದಿಸ್ವರ್ಣ ಕಾರ್ಕಳದ ಕಿರೀಟಕ್ಕೆ "ಪೆನ್ ಟೀಂ" ಗರಿ : ಕ್ರಿಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿಯ ಹೊಸ ಪರಿಕಲ್ಪನೆ

Related Posts

ಸ್ವರ್ಣ ಕಾರ್ಕಳದ ಕಿರೀಟಕ್ಕೆ “ಪೆನ್ ಟೀಂ” ಗರಿ : ಕ್ರಿಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿಯ ಹೊಸ ಪರಿಕಲ್ಪನೆ

ಕಾರ್ಕಳ, ನ. 3 : ಸ್ವರ್ಣ ಕಾರ್ಕಳದ ಇತಿಹಾಸದಲ್ಲಿ ಶಿಕ್ಷಣ ಕ್ಷೇತ್ರವು ಇದೀಗ ಹೊಸ ಕ್ರಾಂತಿಯನ್ನುಂಟು ಮಾಡುತ್ತಿದೆ. ಅಕ್ಷರ ಇಲಾಖೆಯೆಂದೇ ಗೌರವಿಸುವ ಕಾರ್ಕಳ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ಹೊಸ ತಂತ್ರಜ್ಞಾನದೊಂದಿಗೆ ಹೊಸತನದಿಂದ ಹೊಸ ಭಾವನೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಾರ್ಕಳದಲ್ಲಿ ಬರೆಯುವ ಶಿಕ್ಷಕರ “ಪೆನ್ ಟೀಂ” ಎಂಬ ಹೊಸ ತಂಡವು ಈ ಬಾರಿಯ ಕನ್ನಡ ರಾಜ್ಯೋತ್ಸವದ ಮರುದಿನವೇ ಹುಟ್ಟಿಕೊಂಡಿತು.
ಈ ಟೀಂ ಹುಟ್ಟಿದ್ದು ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯುತ್ತಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಾಲೆಯೊಂದರ “ಪರಶುರಾಮ” ಕುಟೀರದಲ್ಲಿ. ಆ ಅಭಿಮಾನದ ಶಾಲೆಯೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲೂರು. ಈ ಶಾಲೆಯು ಈಗಾಗಲೇ ವಿದ್ಯಾಗಮ ಯೋಜನೆಯ ಶಿಕ್ಷಣ ನೀಡುವಲ್ಲಿ ಹೊಸತನದಿಂದ ರಾಜ್ಯದ ಗಮನವನ್ನು ಸೆಳೆದಿದೆ. ಪೆನ್ ಟೀಂನ ಕನಸನ್ನು ಮೊದಲು ಕಂಡವರು ಮತ್ತು ನನಸಾಗಿಸಿದವರು ಕಾರ್ಕಳ ಶಿಕ್ಷಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ. ಎಸ್. ರವರು. ಪ್ರಾಥಮಿಕ ಶಾಲೆಯಲ್ಲಿ “ಎಂಕ್ಲೆನ ಪೆರ್ಮೆದ ಸ್ವರ್ಣ ಕಾರ್ಲ”ದ ಪರಿಕಲ್ಪನೆ ಅಡಿಯಲ್ಲಿ ಈಗಾಗಲೇ “ಗುಬ್ಬಚ್ಚಿ ಇಂಗ್ಲಿಷ್ ಸ್ಪೋಕನ್ ಸ್ಪೀಕಿಂಗ್ ಕ್ಲಾಸ್” ಮತ್ತು “ಕುಟೀರ ಶಿಕ್ಷಣ”ದ ಮೂಲಕ ಮುಕ್ತ ಕಲಿಕೆ ಹಾಗೂ ಪ್ರೌಢಶಾಲೆಗೆ ಸಂಬಂಧಿಸಿದಂತೆ
“SSLC ಮಿಷನ್ 100” ಪರಿಕಲ್ಪನೆಗಳು ಯಶಸ್ಸನ್ನು ಕಂಡವು. ಇದೀಗ ಈ ಪೆನ್ ಟೀಂ ಕೂಡ ಸದುದ್ದೇಶವನ್ನು ಹೊಂದಿ ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಆಗಿರುವ, ಈಗ ಆಗುತ್ತಿರುವ ಮತ್ತು ಮುಂದೆ ಆಗಲಿರುವ ವಿಷಯಗಳನ್ನು ತಾಲೂಕಿನ ಉತ್ತಮವಾಗಿ ಬರೆಯುವ ಸಾಮರ್ಥ್ಯ ಇರುವ ಶಿಕ್ಷಕರಿಂದ ಲೇಖನಗಳ ಮೂಲಕ ಸಶಕ್ತ ದಾಖಲೀಕರಣ ಆಗಲಿದೆ. ಆ ಮೂಲಕ ಪ್ರತೀ ಊರಿನ ಕನ್ನಡದ ಶಾಲೆಗಳ ಯಶೋಗಾಥೆಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಇದು ಕನ್ನಡದ ಶಾಲೆಗಳ ಸಂವರ್ಧನೆ ಮಾಡುವ ವಿಶೇಷವಾದ ಕಾಳಜಿಯನ್ನು ಹೊಂದಿದೆ. ಇದೀಗ ಈ ಟೀಂ ನಲ್ಲಿರುವ ಶಿಕ್ಷಕರು ತರಗತಿಯ ಪಾಠಗಳ ಜೊತೆಗೆ ತಮ್ಮ ಬಿಡುವಿನ ವೇಳೆಯಲ್ಲಿ ಬರವಣಿಗೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾದ ಲೇಖನಗಳ ಮೂಲಕ ಅಕ್ಷರ ಯಜ್ಞದಲ್ಲಿ ಭಾಗವಹಿಸುವರು.

ಮುಂದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಈ ಪೆನ್ ಟೀಮ್ ಬಹು ದೊಡ್ಡ ಹೊಣೆಯನ್ನು ಹೊರಲಿದೆ. ಶಾಸಕ ವಿ. ಸುನೀಲ್ ಕುಮಾರ್ ಅವರ ಸ್ವರ್ಣ ಕಾರ್ಕಳ ಪರಿಕಲ್ಪನೆಯ ವಿಶಾಲವಾದ ಶೀರ್ಷಿಕೆಯ ಅಡಿಯಲ್ಲಿ “ನಮ್ಮೂರ ಶಾಲೆ- ನಮ್ಮ ಅಭಿಮಾನ” ಎಂಬ ಮಹತ್ವಾಕಾಂಕ್ಷಿ ಯೋಜನೆಯು ಸಾಕಾರ ಆಗಲು ಸಹಕಾರ ನೀಡುವುದು. ಶಿಕ್ಷಣವು ಸಮಾಜದ ಅವಿಭಾಜ್ಯ ಅಂಗ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಈ ಪೆನ್ ಟೀಂ ರಚಿಸಲಾಗಿದೆ.
ಇದರ ನೇತೃತ್ವವನ್ನು ಶಿಕ್ಷಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಸಲಹೆಗಾರರಾಗಿ ರಾಜೇಂದ್ರ ಭಟ್ ಕೆ. ಅವರು ಪೆನ್ ಟೀಮನ್ನು ಮುನ್ನಡೆಸಲಿದ್ದಾರೆ. ನಲ್ಲೂರು ಶಾಲೆಯ ಪರಶುರಾಮ ಕುಟೀರದಲ್ಲಿ ಈ ಪೆನ್ ಟೀಮನ್ನು ಕಾರ್ಕಳದ ಬಿಇಒ ಉದ್ಘಾಟನೆ ಮಾಡಿ ‘ಬ್ರಾಂಡ್ ಕಾರ್ಕಳ’ ದ ಮಹಾ ಉದ್ದೇಶದಲ್ಲಿ ಪೆನ್ ಟೀಮ್ ಕೈಜೋಡಿಸಬೇಕು ಎಂದು ಕರೆನೀಡಿದರು.
ಪೆನ್‌ ಟೀಂ ಸದಸ್ಯರು ಬರೆಯುವ ಉತ್ತಮ ಲೇಖನಗಳು newskarkala.com ವೆಬ್‌ ಸೈಟಿನಲ್ಲಿ ಪ್ರಕಟವಾಗಲಿದೆ.
ನಲ್ಲೂರು ಶಾಲೆಯ ಮುಖ್ಯ ಶಿಕ್ಷಕ ನಾಗೇಶ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಗಣೇಶ್ ಜಾಲ್ಸೂರು

LEAVE A REPLY

Please enter your comment!
Please enter your name here

Latest Posts

error: Content is protected !!