Sunday, October 17, 2021
spot_img
Homeಕ್ರೀಡೆಆರ್‌ಸಿಬಿಗೆ ಈ ಸಲವೂ ಐಪಿಎಲ್‌ ಕಪ್‌ ಎತ್ತುವ ಭಾಗ್ಯ ‌ ಇಲ್ಲವಂತೆ; ಯಾರು,...

ಆರ್‌ಸಿಬಿಗೆ ಈ ಸಲವೂ ಐಪಿಎಲ್‌ ಕಪ್‌ ಎತ್ತುವ ಭಾಗ್ಯ ‌ ಇಲ್ಲವಂತೆ; ಯಾರು, ಯಾಕೆ ಹೇಳಿದ್ರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಪ್ಲೇ ಆಫ್ ಸುತ್ತನ್ನು ಪ್ರವೇಶಿಸಿದೆ.
ಈ ಬಾರಿ ಅರಬ್ ನಾಡಿಗೆ ಶಿಫ್ಟ್ ಆಗಿರುವ ಐಪಿಎಲ್ ಟೂರ್ನಮೆಂಟ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಲೀಗ್ ಹಂತದಲ್ಲಿ ಒಟ್ಟು ಹದಿನಾಲ್ಕು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಗೆದ್ದುಕೊಂಡಿದ್ದು ಉಳಿದ 7 ಪಂದ್ಯಗಳಲ್ಲಿ ಸೋತಿದೆ.
ಅದರಲ್ಲೂ ಕೊನೆಯ ನಾಲ್ಕು ಲೀಗ್ ಪಂದ್ಯಗಳನ್ನೂ ಸೋಲುವ ಮೂಲಕ ಆರ್.ಸಿ.ಬಿ. ಆತ್ಮವಿಶ್ವಾಸಕ್ಕೆ ಕೊಂಚ ಪೆಟ್ಟುಬಿದ್ದಿದೆ.
ಇದೀಗ ಪ್ಲೇ ಆಫ್ ಗೆ ತೇರ್ಗಡೆ ಹೊಂದಿರುವ ಆರ್.ಸಿ.ಬಿ. ಈ ಬಾರಿಯಾದರೂ ಕಪ್ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
ಆದರೆ ಅಭಿಮಾನಿಗಳ ಉತ್ಸಾಹ ಮತ್ತು ನಿರಿಕ್ಷೆಗಳಿಗೆ ತಣ್ಣೀರೆರಚುವ ಹೇಳಿಕೆಯೊಂದನ್ನು ಇಂಗ್ಲೆಂಡಿನ ಮಾಜಿ ಕ್ರಿಕೆಟಿಗರೊಬ್ಬರು ನೀಡಿದ್ದಾರೆ.
‘ಈ ಬಾರಿ ಆರ್.ಸಿ.ಬಿ. ಕಪ್ ಗೆಲ್ಲುವುದಿಲ್ಲ, ನಾನು ಈ ಮಾತನ್ನು ಈ ಬಾರಿಯ ಐಪಿಎಲ್ ಕೂಟದ ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದೇನೆ’ ಎಂದು ಆಂಗ್ಲರ ನಾಡಿನ ಮಾಜಿ ಕ್ರಿಕೆಟಿಗ ಹಾಗೂ ಇಂಗ್ಲಂಡ್ ತಂಡದ ಮಾಜಿ ಕಪ್ತಾನ ಮೈಕಲ್ ವಾನ್ ಹೇಳಿದ್ದಾರೆ.
ಒಂದರ ಹಿಂದೆ ಒಂದರಂತೆ ಮುಂದಿನ ಮೂರು ಪಂದ್ಯಗಳನ್ನು ಗೆಲ್ಲುವ ಕಿಚ್ಚು ಕೊಹ್ಲಿ ನಾಯಕತ್ವದ ಆರ್.ಸಿ.ಬಿ. ತಂಡಕ್ಕೆ ಇಲ್ಲ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಕಪ್ ಗೆಲ್ಲುವುದಕ್ಕೆ ಬೇಕಾದಂತೆ ಆಡುವ ಕಿಚ್ಚು ಮತ್ತು ಒಂದು ತಂಡವಾಗಿ ಆಡುವ ಸ್ಪೂರ್ತಿ ಆರ್.ಸಿ.ಬಿ. ತಂಡದಲ್ಲಿ ಇಲ್ಲ ಎಂದು ವಾನ್ ಅವರು ಕ್ರಿಕ್ ಬಝ್ ನೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆರ್.ಸಿ.ಬಿ. ಸೋತರೂ ತಾನು ನೀಡಿದ 153 ರನ್ ಗುರಿಯನ್ನು ಮುಟ್ಟಲು ಕ್ಯಾಪಿಟಲ್ಸ್ ಬ್ಯಾಟ್ಸ್ ಮನ್ ಗಳನ್ನು ಆರ್.ಸಿ.ಬಿ. ಬೌಲರ್ಸ್ 17.3 ಓವರ್ ಗಳ ತನಕ ಸತಾಯಿಸಿದ್ದರು.
ಇದರಿಂದಾಗಿ ರನ್ ರೇಟ್ ನಲ್ಲಿ ಕೆಕೆಆರ್ ಗಿಂತ ಮುನ್ನಡೆ ಸಾಧಿಸುವ ಮೂಲಕ ಆರ್.ಸಿ.ಬಿ. ಪ್ಲೇ ಆಫ್ ಗೆ ಕ್ವಾಲಿಫೈ ಆಯ್ತು. ತನ್ನ ಪ್ಲೇ ಆಫ್ ಪಂದ್ಯದಲ್ಲಿ ಆರ್.ಸಿ.ಬಿ. ಕೆಕೆಆರ್ ಅಥವಾ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ.
ಯಾರು ಏನೇ ಹೇಳಿದರೂ ಆರ್‌ ಸಿಬಿ ಅಭಿಮಾನಿಗಳ ಉತ್ಸಾಹ ಮಾತ್ರ ಕುಂದಿಲ್ಲ. ಅರಬ್ ನಾಡಿನಲ್ಲಿ ಐಪಿಎಲ್ ಕಪ್ ನಮ್ದೇ ಎಂದು ಆರ್.ಸಿ.ಬಿ. ಅಭಿಮಾನಿಗಳು ಕಾನ್ಫಿಡೆಂಟ್ ಆಗಿ ಹೇಳ್ತಾ ಇದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!