Wednesday, October 27, 2021
spot_img
Homeದೇಶಕೆಬಿಸಿಯಲ್ಲಿ ಹಿಂದುಗಳಿಗೆ ಅವಮಾನ :ಅಮಿತಾಭ್‌ ಬಚ್ಚನ್‌ ವಿರುದ್ಧ ಪೊಲೀಸ್‌ ದೂರು ದಾಖಲು

ಕೆಬಿಸಿಯಲ್ಲಿ ಹಿಂದುಗಳಿಗೆ ಅವಮಾನ :ಅಮಿತಾಭ್‌ ಬಚ್ಚನ್‌ ವಿರುದ್ಧ ಪೊಲೀಸ್‌ ದೂರು ದಾಖಲು

ಮುಂಬಯಿ, ನ.3 : ಮೇರು ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮ ಈಗ ಹಿಂದುಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ ಆರೋಪಕ್ಕೊಳಗಾಗಿದೆ. ಎರಡು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಕೆಬಿಸಿ ಬಾಯ್ಕಾಟ್‌ ಅಭಿಯಾನ ತೀವ್ರವಾಗಿ ನಡೆಯುತ್ತಿದೆ.
ಮಹಾರಾಷ್ಟ್ರದ ಬಿಜೆಪಿ ಶಾಸಕ ಅಭಿಮನ್ಯು ಪವಾರ್‌ ಅವರು ಅಮಿತಾಭ್‌ ಬಚ್ಚನ್‌ ಹಾಗೂ ಕೆಬಿಸಿ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ. ಶುಕ್ರವಾರದ ಕರ್ಮವೀರ್‌ ವಿಶೇಷ ಸಂಚಿಕೆಯಲ್ಲಿ ಅಮಿತಾಭ್‌ ಬಚ್ಚನ್‌ ಕೇಳಿದ ಪ್ರಶ್ನೆಗಳು ಹಿಂದುಗಳ ಧಾರ್ಮಿಕ ನಂಬಿಕೆಯನ್ನು ಅಪಹಾಸ್ಯ ಮಾಡಿವೆ. ಈ ಹಿನ್ನೆಲೆಯಲ್ಲಿ ಬಚ್ಚನ್‌ ಹಾಗೂ ಸೋನಿ ಎಂಟರ್‌ಟೈನ್‌ಮೆಂಟ್‌ ಟೆಲಿವಿಶನ್‌ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪವಾರ್‌ ದೂರಿನಲ್ಲಿ ಆಗ್ರಹಿಸಿದ್ದಾರೆ.
ಕೆಬಿಸಿಯಲ್ಲಿ ಹಿಂದುಗಳಿಗೆ ಅವಮಾನ ಮಾಡಿರುವುದಲ್ಲದೆ ಹಿಂದುಗಳು ಮತ್ತು ಬೌದ್ಧರ ನಡುವೆ ಸೌಹಾರ್ದ ಕದಡುವ ಪ್ರಯತ್ನ ಮಾಡಲಾಗಿದೆ ಎಂದು ಪವಾರ್‌ ಆರೋಪಿಸಿದ್ದಾರೆ.
ಈ ಕಂತಿನಲ್ಲಿ ಸಾಮಾಜಿಕ ಕಾರ್ಯಕರ್ತ ಬೇಜ್ವಾಡ ವಿಲ್ಸನ್‌ ಮತ್ತು ನಟ ಅನುಪ್‌ ಸೋನಿ ಹಾಟ್‌ ಸೀಟಿನಲ್ಲಿದ್ದರು. 1927, ಡಿ. 25ರಂದು ಡಾ. ಬಿ.ಆರ್.‌ ಅಂಬೇಡ್ಕರ್‌ ಮತ್ತು ಅವರ ಅನುಯಾಯಿಗಳು ಯಾವ ಗ್ರಂಥವನ್ನು ಸುಟ್ಟು ಹಾಕಿದರು ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ನೀಡಿದ ನಾಲ್ಕು ಆಯ್ಕೆಗಳು ಹಿಂದು ಧಾರ್ಮಿಕ ಗ್ರಂಥಗಳಾಗಿದ್ದವು. ಇದು ಉದ್ದೇಶಪೂರ್ವಕವಾಗಿ ಹಿಂದುಗಳಿಗೆ ಮಾಡಿದ ಅವಮಾನ ಎಂಬ ಆಕ್ರೋಶ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!