Wednesday, October 27, 2021
spot_img
Homeಸ್ಥಳೀಯ ಸುದ್ದಿಗೆಜ್ಜೆನಾದ ಸಮಾರೋಪ ಸಮಾರಂಭ

ಗೆಜ್ಜೆನಾದ ಸಮಾರೋಪ ಸಮಾರಂಭ

ಕಾರ್ಕಳ : ಭಾರತೀಯ ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ಕಾರ್ಕಳ ಆಯೋಜನೆಯಲ್ಲಿ ಜೈನ ಭಾಂದವರಿಗಾಗಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ “ಗೆಜ್ಜೆನಾದ” ಸಮಾರೋಪ ಸಮಾರಂಭ ನ. 1ರಂದು ನಡೆಯಿತು. ಆನ್‌ ಲೈನ್‌ ನಲ್ಲಿ ನಡೆದ ಈ ಕಾರ್ಯಕ್ರಮವನ್ನು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಇವರು ಉದ್ಘಾಟಿಸಿದರು. ಜೈನ್ ಮಿಲನ್ ವಲಯ 8ರ ಅಧ್ಯಕ್ಷ ಪುಷ್ಪರಾಜ್ ಜೈನ್, ವಲಯ ನಿರ್ದೇಶಕರಾದ ಮಹಾವೀರ್ ಹೆಗ್ಡೆ ಅಂಡಾರು, ಕಾರ್ಯದರ್ಶಿ ಜಗದೀಶ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಕಳ ಜೈನ್ ಮಿಲನ್‌ ಅಧ್ಯಕ್ಷ ಅಮರನಾಥ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

70 ಮಂದಿ ಭಾಗಿ

ಒಟ್ಟು 4 ವಿಭಾಗಗಳಲ್ಲಿ ನಡೆದ ನೃತ್ಯಸ್ಪರ್ಧೆಯಲ್ಲಿ 70 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಮೊದಲನೇ ವಿಭಾಗದಲ್ಲಿ (1ನೇ ತರಗತಿಯಿಂದ 4ನೇ ತರಗತಿ) ಶಾರ್ವಿ ಎಂ. ಜೈನ್ ಸಿದ್ದಕಟ್ಟೆ, ಶ್ರೀನಿಕ ಎಸ್. ಉಂಚಂಗಿ, ತನ್ವಿ ಜೈನ್ ಮೂಡಬಿದ್ರಿ, ಎರಡನೇ ವಿಭಾಗದಲ್ಲಿ (5ರಿಂದ 8) ಸರ್ವಾರ್ಥ್ ಎಸ್. ಜೈನ್ ವೇಣೂರು, ಮಾನ್ಯ ಅಭಯ್ ಹಲಗಿ ಬೆಳಗಾವಿ ಮತ್ತು ಮೌಲ್ಯ ವೈ. ಆರ್. ಜೈನ್ ಮೂಡಬಿದ್ರಿ, ಮೂರನೇ ವಿಭಾಗದಲ್ಲಿ (9ರಿಂದ 12) ಅನನ್ಯ ಎಂ. ಮೂಡಬಿದ್ರಿ, ಸಂಸ್ಕೃತಿ ನಿರಂಜನ್ ಮೂಡಬಿದ್ರಿ ಮತ್ತು ಮಾನ್ಯ ಜೈನ್ ಬಿ. ಜೆ. ಶ್ರವಣಬೆಳಗೊಳ, ನಾಲ್ಕನೇ ವಿಭಾಗದಲ್ಲಿ (12ನೇ ತರಗತಿಯಿಂದ ಮೇಲ್ಪಟ್ಟು) ಅನುಷಾ ಜೈನ್ ನೆಲ್ಯಾಡಿ, ಶ್ರವಣ ಕುಮಾರಿ ವೇಣೂರು ಮತ್ತು ಕರ್ತವ್ಯ ಜೈನ್ ಕಾರ್ಕಳ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.

ಪ್ರಣಮ್ಯ ಅಶ್ವಿನ್ ಕುಮಾರ್ ಪ್ರಾರ್ಥಿಸಿ, ಯುವ ಜೈನ್‌ ಮಿಲನ್‌ ಕಾರ್ಯದರ್ಶಿ ಸಮೃದ್ ಕುಮಾರ್ ಸ್ವಾಗತಿಸಿದರು. ಯುವ ಜೈನ್ ಮಿಲನ್ ಅಧ್ಯಕ್ಷ‌ ಕುವರ ವೀರೇಂದ್ರ ಜೈನ್ ಪ್ರಸ್ತಾವನೆಗೈದರು. ಜೈನ್ ಮಿಲನ್‌ ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ಕೆ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಸಂತ್ ಕುಮಾರ್ ಬಂಗ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!