ಬೆಂಗಳೂರು, ನ. 2 : ನಾಳೆ ಬಿಹಾರದ ಎರಡನೇ ಹಂತದ ಚುನಾವಣೆಯ ಜೊತೆಗೆ ಕರ್ನಾಟಕದ ಸಿರಾ ಮತ್ತು ಆರ್ .ಆರ್. ನಗರ ಕ್ಷೇತ್ರ ಸೇರಿ 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯೂ ನಡೆಯಲಿದೆ.
ಮಧ್ಯಪ್ರದೇಶವೊಂದರಲ್ಲೇ 28 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇಲ್ಲಿ ಉಪ ಚುನಾವಣೆ ಮಿನಿ ವಿಧಾನಸಭೆ ಚುನಾವಯಷ್ಟೇ ಕಾವು ಪಡೆದುಕೊಂಡಿದೆ. ಗುಜರಾತ್-8, ಉತ್ತರಪ್ರದೇಶ- 7,ಕರ್ನಾಟಕ, ಜಾರ್ಕಂಡ್, ನಾಗಾಲ್ಯಾಂಡ್ ಮತ್ತು ಒಡಿಶಾ – ತಲಾ 2, ತೆಲಂಗಾಣ, ಛತ್ತೀಸ್ ಗಢ, ಹರ್ಯಾಣ- ತಲಾ 1 ಉಪ ಚುನಾವಣೆ ನಡೆಯಲಿರುವ ರಾಜ್ಯಗಳು. ಇದರ ಜೊತೆಗೆ ನ.3 ರಂದು ಬಿಹಾರ ವಿಧಾನಸಭೆಯ ಎರಡನೇ ಹಂತದ ಚುನಾವಣೆ ನಡೆಯಲಿದೆ. ಮತಎಣಿಕೆ ನ.10ರಂದು ನಡೆಯಲಿದೆ.
