ದಿಲ್ಲಿ, ನ. 2 : ಹೊಸ ಬ್ಯಾಂಕ್ ನಿಯಮಗಳು ಜಾರಿಗೆ ಬಂದಿವೆ ಮತ್ತು ಇವೆಲ್ಲ ಗ್ರಾಹಕರ ಜೇಬಿಗೆ ತೂತು ಕೊರೆಯುವ ನಿಯಮಗಳು. ನ.1ರಿಂದ ಹೊಸ ನಿಯಮಗಳು ಜಾರಿಯಾಗಿದ್ದರೂ ನಿನ್ನೆ ಭಾನವಾರವಾದ ಕಾರಣ ಕಾರ್ಯರೂಪಕ್ಕೆ ಬಂದಿರುವುದು ಇಂದಿನಿಂದ.
ಹೊಸ ನಿಯಮಗಳ ಪ್ರಕಾರ ನಿಮ್ಮದೆ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಮತ್ತು ಠೇವಣಿ ಹಣವನ್ನು ಹಿಂಪಡೆಯಲು ಬ್ಯಾಂಕಿಗೆ ಶುಲ್ಕ ಪಾವತಿಸಬೇಕು.
ಮೊದಲಾಗಿ ಬ್ಯಾಂಕ್ ಆಫ್ ಬರೋಡ ಹೊಸ ನಿಯಮವನ್ನು ಕಾರ್ಯರೂಪಕ್ಕೆ ತರಲಿದೆ. ಈ ಬ್ಯಾಂಕ್ ಉಳಿತಾಯ ಖಾತೆ, ಓವರ್ ಡ್ರಾಫ್ಟ್ ಖಾತೆ ಮತ್ತು ಚಾಲ್ತಿ ಖಾತೆಗೆ ಬೇರೆ ಬೇರೆ ಶುಲ್ಕ ನಿಗದಿಪಡಿಸಿದೆ. ಉಳಿದ ಬ್ಯಾಂಕುಗಳು ಶೀಘ್ರ ಈ ಮಾದರಿಯನ್ನು ಅನುಸರಿಸಲಿವೆ.
ಚಾಲ್ತಿ ಖಾತೆಯಿಂದ ಒಂದು ತಿಂಗಳಲ್ಲಿ ಹಣವನ್ನು ಉಚಿತವಾಗಿ ಹಿಂಪಡೆಯಬಹುದು. ಅನಂತರ ಪ್ರತಿ ಸಲ ಹಿಂಪಡೆದಾಗ 150 ರೂ. ಶುಲ್ಕ ಪಾವತಿಸಬೇಕು. ಉಳಿತಾಯ ಖಾತೆಗೂ ಇದೇ ನಿಯಮ ಅನ್ವಯಿಸುತ್ತದೆ. ಶುಲ್ಕದ ಮೊತ್ತ ಮಾತ್ರ 40 ರೂ.
ಜನಧನ ಖಾತೆಯವರಿಗೆ ತುಸು ವಿನಾಯಿತಿ ನೀಡಲಾಗಿದೆ. ಅವರಿಗೆ ಠೇವಣಿ ಇಡಲು ಯಾವುದೇ ಶುಲ್ಕವಿಲ್ಲ. ಆದರೆ ಹಿಂಪಡೆಯುವಾಗ ಮಿತಿಯ ಬಳಿಕ 100 ರೂ. ಶುಲ್ಕ ಪಾವತಿಸಬೇಕು.
