ಕಾರ್ಕಳ : ನ್ಯೂಸ್ ಕಾರ್ಕಳ ಸುದ್ದಿ ಜಾಲತಾಣದ ವತಿಯಿಂದ ಪ್ರತೀ ವರ್ಷ ಒಬ್ಬ ಕನ್ನಡದ ಸಾಧಕರಿಗೆ ಸನ್ಮಾನ ಸಹಿತ “ಕನ್ನಡ ಸಾರಥಿ” ಪ್ರಶಸ್ತಿಯನ್ನು ನೀಡಲು ನಿರ್ಧಾರ ಮಾಡಲಾಗಿದ್ದು ಈ ವರ್ಷದ ಚೊಚ್ಚಲ ಪ್ರಶಸ್ತಿಯನ್ನು ಕವಿ, ತ್ರಿಭಾಷಾ ಅಷ್ಟಾವಧಾನಿ, ಸಂಗೀತ ಗುರು, ನಿವೃತ್ತ ಶಿಕ್ಷಕ ಉಮೇಶ್ ಗೌತಮ್ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ನ. 1ರಂದು ಎಂಪಿಎಂ ಕಾಲೇಜಿನಲ್ಲಿ ನಡೆಯುವ ಕನ್ನಡ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.