ಐಪಿಲ್ ಪಂದ್ಯಗಳು ನಿರ್ಣಾಯಕ ಹಂತಕ್ಕೆ ಬಂದು ನಿಂತಿವೆ. ಇಂದು RCB ತಂಡ ಬಲಿಷ್ಠವಾದ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಗೆದ್ದು ಎರಡು ಅಂಕ ಪಡೆದರೆ ಸುಲಭದಲ್ಲಿ ಪ್ಲೇ ಆಫ್ ಸುತ್ತಿಗೆ ಪ್ರವೇಶ. ಸೋತರೆ ಕೊನೆಯ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಸೋಲಿಸಬೇಕಾದ ಅನಿವಾರ್ಯತೆ ಇದೆ. ಹೈದರಾಬಾದ್ ತಂಡವು 10 ಅಂಕ ಮಾತ್ರ ಹೊಂದಿದ್ದು ಇಂದಿನ ಪಂದ್ಯ ಮತ್ತು ಕೊನೆಯ ಪಂದ್ಯ ಎರಡನ್ನೂ ಗೆಲ್ಲಬೇಕಾಗಿದೆ. ಒತ್ತಡ ಹೈದರಾಬಾದ ತಂಡದ ಮೇಲೆ ಜಾಸ್ತಿ ಇದೆ. RCB ತಂಡವು ಮಿಡ್ಲ್ ಆರ್ಡರ್ ಕುಸಿತದ ಸಮಸ್ಯೆ ಎದುರಿಸುತ್ತಿದೆ. ಪೇಸ್ ಬೌಲರ ನವದೀಪ್ ಸೈನಿ ಇನ್ನೂ ಚೇತರಿಸಿಕೊಂಡಿಲ್ಲ. ಹೈದರಾಬಾದ್ ತಂಡದಲ್ಲೂ ಬ್ಯಾಟಿಂಗ್ ಸಮಸ್ಯೆಗಳು ಮುಂದುವರೆದಿವೆ. ಇಂದಿನ ಸೋಲು ಮಾಜಿ ಚಾಂಪಿಯನ್ ತಂಡವನ್ನು ಕೂಟದಿಂದ ಹೊರ ಹಾಕುತ್ತದೆ. ಆದ್ದರಿಂದ ಇಂದಿನ ಪಂದ್ಯವು ರೋಚಕತೆಯನ್ನು ಹೊಂದಿದೆ.