ಬ್ಲೂಮೂನ್‌ಗೂ ಭೂಕಂಪಕ್ಕೂ ಸಂಬಂಧ ಇದೆಯೇ? ಏನು ಹೇಳುತ್ತಾರೆ ಜ್ಯೋತಿಷ್ಯರು?

0
ಸಾಂದರ್ಭಿಕ ಚಿತ್ರ

ಕಾರ್ಕಳ, ಅ. 31: ಇಂದು ರಾತ್ರಿ ಆಕಾಶದಲ್ಲಿ ನಮಗೆ ಬ್ಲೂಮೂನ್‌ ದರ್ಶನವಾಗಲಿದೆ. ರಾತ್ರಿ 8.19ಕ್ಕೆ ಗಗನದ ಈ ವಿಸ್ಮಯವನ್ನು ನಾವು ಕಣ್ತುಂಬಿಕೊಳ್ಳಬಹುದು. ಬ್ಲೂಮೂನ್‌ ಸಾಮಾನ್ಯ ಖಗೋಲ ವಿದ್ಯಮಾನ ಅಲ್ಲದಿದ್ದರೂ ತೀರಾ ಅಪರೂಪದ ವಿದ್ಯಮಾನವೂ ಅಲ್ಲ. ಎರಡು ವರ್ಷದ ಹಿಂದೆ ಎರಡು ಸಲ ಬ್ಲೂ ಮೂನ್‌ ದರ್ಶನವಾಗಿತ್ತು. 2023ರಲ್ಲಿ ಮತ್ತೊಮ್ಮೆ ದರ್ಶನವಾಗಲಿದೆ.
ಹೀಗೆ ಗ್ರಹಗಳು ಮತ್ತು ಆಕಾಶಕಾಯಗಳ ಚಲನೆಯಲ್ಲಿ ಆಗುವ ಬದಲಾವಣೆಗಳು ಭೂಮಿಯ ಮೇಲೆ ನೇರ ಪರಿಣಾಮ ಬೀರುವುದನ್ನು ನಾವು ಹಲವು ಬಾರಿ ಕಂಡಿದ್ದೇವೆ. ಇದೀಗ ನಿನ್ನೆ ಟರ್ಕಿ ಮತ್ತು ಗ್ರೀಸ್‌ನಲ್ಲಿ ಸಂಭವಿಸಿರುವ ಪ್ರಬಲ ಭೂಕಂಪಕ್ಕೂ ಇಂದು ಕಾಣಿಸಿಕೊಳ್ಳಲಿರುವ ಬ್ಲೂಮೂನ್‌ಗೂ ಪರಸ್ಪರ ಸಂಬಂಧ ಇದೆ ಎನ್ನುತ್ತಿದ್ದಾರೆ ಜ್ಯೋತಿಷ್ಯರು.
ವಿಜ್ಞಾನಗಳು ಈ ವಿಚಾರದಲ್ಲಿ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರು ಇದು ಬ್ಲೂಮೂನ್‌ ಪರಿಣಾಮ ಎಂದು ಬಲವಾಗಿ ವಾದಿಸುತ್ತಿದ್ದಾರೆ. ಅದಕ್ಕೆ ಅವರು ಹಿಂದೆ ಸಂಭವಿಸಿದ ಕೆಲವು ಬ್ಲೂಮೂನ್‌ ಸನ್ನಿವೇಶ ಹಾಗೂ ಆಗ ಉಂಟಾದ ವಿಕೋಪಗಳ ಉದಾಹರಣೆ ಕೊಡುತ್ತಿದ್ದಾರೆ.
ಈ ವರ್ಷದುದ್ದಕ್ಕೂ ದುರಂತಗಳು ಮತ್ತು ದುರ್ಘಟನೆಗಳೇ ಸಂಭವಿಸುತ್ತಿವೆ. ಕೊರೊನಾ ಲಕ್ಷಗಟ್ಟಲೆ ಮಂದಿಯನ್ನು ಬಲಿತೆಗೆದುಕೊಂಡಿದೆ. ಇದೀಗ ಬ್ಲೂಮೂನ್‌ ಹೊಸ್ತಿಲಲ್ಲೇ ಭೂಕಂಪ ಸಂಭವಿಸಿದೆ. ಈ ವರ್ಷ ಇನ್ನೂ ಇಂಥ ಕೆಲವು ದುರ್ಘಟನೆಗಳನ್ನು ಕಾಣಲಿದ್ದೇವೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ ಜ್ಯೋತಿಷ್ಯರು. ಹಾಗೆಂದು ಜನರು ಭೀತಿ ಪಡುವ ಅಗತ್ಯವಿಲ್ಲ. ತಕ್ಷಣಕ್ಕೆ ಯಾವುದೇ ಪರಿಣಾಮ ಗೋಚರಕ್ಕೆ ಬರುವುದಿಲ್ಲ ಎನ್ನುತ್ತಾರೆ ಕಾರ್ಕಳದ ಖ್ಯಾತ ಜ್ಯೋತಿಷಿ ಸುಬ್ರಹ್ಮಣ್ಯ ಆಚಾರ್ಯ.

Previous articleಡಿಸೆಂಬರ್‌ ದ್ವಿತೀಯಾರ್ಧದಲ್ಲಿ ಶಾಲೆಗಳು ಪ್ರಾರಂಭ?
Next articleಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲಾಟ್ ಫಾರ್ಮ್‌ ‌

LEAVE A REPLY

Please enter your comment!
Please enter your name here