ಪೆರ್ಡೂರಿನಲ್ಲಿ ಲವ್ ಜೆಹಾದ್‌ ? -ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಅಪಹರಣ ಆರೋಪ

0


ಹಿರಿಯಡಕ, ಅ.30: ಇಲ್ಲಿಗೆ ಸಮೀಪದ ಪೆರ್ಡೂರಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ಲವ್‌ ಜೆಹಾದ್‌ ತಿರುವು ಪಡೆದುಕೊಂಡಿದೆ. ಹಿಂದು ಸಂಘಟನೆಗಳು ಲವ್‌ ಜೆಹಾದ್‌ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗಿವೆ.
ಅ.28ರಂದು ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಆಕೆಯನ್ನು ಅನ್ಯಕೋಮಿನ ವ್ಯಕ್ತಿ ಅಪಹರಿಸಿದ್ದಾನೆ ಎಂದು ಹೇಳಲಾಗಿದೆ. ಬೆಳಗ್ಗೆ ಯುವತಿ ವಿದ್ಯಾರ್ಥಿವೇತನದ ಹಣ ತರುತ್ತೇನೆಂದು ಹೇಳಿ ಹೋದವಳು ವಾಪಾಸು ಬಂದಿಲ್ಲ. ಸಂಜೆವರೆಗೆ ಕಾದು ಗಾಬರಿಯಾದ ಹೆತ್ತವರು ಬಳಿಕ ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೆರ್ಡೂರಿನ ಓರ್ವ ಅನ್ಯಕೋಮಿನ ಯುವಕ ಮಗಳನ್ನು ಅಪಹರಿಸಿರುವ ಅನುಮಾನವನ್ನು ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ.
ಯುವತಿ ನಾಪತ್ತೆಯಾಗಿ 48 ತಾಸು ಕಳೆದಿದ್ದರೂ ಪತ್ತೆಹಚ್ಚಲು ಸಾಧ್ಯವಾಗದಿರುವುದಕ್ಕೆ ಹಿಂದು ಸಂಘಟನೆಗಳು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.

Previous articleಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆ : ಮುಹೂರ್ತ ಫಿಕ್ಸ್‌ ಮಾಡಿದ ಯಡಿಯೂರಪ್ಪ
Next articleಇದೇನಾ ಇತಿಹಾಸ…! -ಭಾರತಕ್ಕೆ ಮುಸ್ಲಿಂ ದಾಳಿ ಮತಾಂತರ ಪ್ರೇರಿತವೆ?

LEAVE A REPLY

Please enter your comment!
Please enter your name here