ಬೆಂಗಳೂರು, ಅ.30 : ರಾಜ್ಯದಲ್ಲಿ ಮತ್ತೆ ಸಂಪುಟ ವಿಸ್ತರಣೆ ಕುತೂಹಲ ಗರಿಕೆದರಿದೆ. ಇದಕ್ಕೆ ಕಾರಣ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸಂಪುರ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಮಾಡಿರುವುದು.
ಆರ್ .ಅರ್. ನಗರ ಮತ್ತು ಸಿರಾ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಚುನಾವಣೆ ಮುಗಿದ ಕೂಡಲೇ ಯಡಿಯೂರಪ್ಪ ದಿಲ್ಲಿಗೆ ಹೋಗಿ ಸಂಪುಟ ವಿಸ್ತರಣೆಗೆ ವರಿಷ್ಠರ ಅನುಮೋದನೆ ಪಡೆದುಕೊಳ್ಳಲಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲು ಯಡಿಯೂರಪ್ಪನವರ ಮೇಲೆ ಬಹಳ ಒತ್ತಡವಿದೆ. ಬಿಜೆಪಿಯಲ್ಲಿ ಸಚಿವರಾಗಲು ಬಯಸಿರುವ ಒಂದು ಡಜನ್ಗೂ ಅಧಿಕ ಮಂದಿಯಿದ್ದಾರೆ. ಈ ಪೈಕಿ ಎಷ್ಟು ಮಂದಿಗೆ ಸಿಹಿ ಎಷ್ಟು ಮಂದಿಗೆ ಕಹಿ ಸಿಗುತ್ತದೆ ಎನ್ನುವುದು ಯಡಿಯೂರಪ್ಪನವರು ದಿಲ್ಲಿಯಿಂದ ಹಿಂದಿರುಗಿದ ಬಳಿಕ ತಿಳಿಯಲಿದೆ.
ಇದೇ ವೇಳೆ ಉಪ ಚುನಾವಣೆ ಬಳಿಕ 15-20 ದಿನವಷ್ಟೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಯಡಿಯೂರಪ್ಪನವರು ಉಪ ಚುನಾವಣೆ ಬಳಿಕ ಬದಲಾವಣೆಗಳಾಗುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ, ಬಿಜೆಪಿಯಲ್ಲಿ ಅಲ್ಲ ಎಂದಿದ್ದಾರೆ.