ದೇವರಗುಂಡಿ ಜಲಪಾತದಲ್ಲಿ ಅಸಭ್ಯ ಫೋಟೊಶೂಟ್‌ : ಸಾರ್ವಜನಿಕರ ಆಕ್ರೋಶ

0

ಸುಳ್ಯ, ಅ. 29:ಇಲ್ಲಿನ ಧಾರ್ಮಿಕ ಮಹತ್ವ ಹೊಂದಿರುವ ದೇವರಗುಂಡಿ ಜಲಪಾತದಲ್ಲಿ ಮೋಡೆಲ್‌ ಗಳನ್ನು ಕರೆತಂದು ಅರೆಬೆತ್ತಲೆ ಫೋಟೊಶೂಟ್‌ ನಡೆಸಿದ ವಿಚಾರ ಬೆಳಕಿಗೆ ಬಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಋಷಿಮುನಿಗಳು ತಪಸ್ಸು ಮಾಡಿದ ಎಂಬ ನಂಬಿಕೆ ದೇವರಗುಂಡಿ ಜಲಪಾತಕ್ಕೆ ಇದೆ. ಇಲ್ಲಿಯೇ ಪಕ್ಕದಲ್ಲಿ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನವೂ ಇದೆ. ಇದು ದೇವಸ್ಥಾನಕ್ಕೆ ಸೇರಿದ ಜಾಗವಾಗಿದ್ದು, ಭಕ್ತರು ಈ ಜಲಪಾತದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಇಂಥ ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೊಶೂಟ್‌ ಮಾಡಿರುವುದರಿಂದ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರುಣ್‌ ಕುಮಾರ್‌ ಎಂಬಾತ ಫೋಟೊಶೂಟ್‌ ಮಾಡಿದ್ದಾರೆ. ಮೋಡೆಲ್‌ ಗಳ ಪೈಕಿ ಒಬ್ಬಾಕೆಯ ಹೆಸರು ಬೃಂದಾ ಅರಸ್‌ ಎಂದು ತಿಳಿದುಬಂದಿದೆ. ದೇವಸ್ಥಾನದವರು ಈ ಫೋಟೊಶೂಟ್‌ ಗೆ ಅನುಮತಿ ನೀಡಿರಲಿಲ್ಲ. ಯಾರ ಅನುಮತಿಯನ್ನೂ ಪಡೆಯದೆ ಇಲ್ಲಿ ಫೋಟೊಶೂಟ್‌ ನಡೆಸಿದ್ದಾರೆ ಎನ್ನಲಾಗಿದೆ.

Previous articleಆರೋಗ್ಯ ಧಾರಾ – ದೇಹ ಪ್ರಕೃತಿ
Next articleಕಾರ್ಕಳ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮೀಸಲಾತಿ ಹಕ್ಕಿನ ಉಲ್ಲಂಘನೆ-ಬಿಪಿನ್‌ಚಂದ್ರ ಪಾಲ್‌

LEAVE A REPLY

Please enter your comment!
Please enter your name here