ಸರಕಾರಿ ಸೌಲಭ್ಯ – ಅಂತ್ಯ ಸಂಸ್ಕಾರ ಸಹಾಯ ನಿಧಿ ಮತ್ತು ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ

1

       ಕುಟುಂಬದಲ್ಲಿ ಯಾರಾದರು ಮರಣಹೊಂದಿದರೆ  ಕುಟುಂಬದವರಿಗೆ ಆಗುವ  ನೋವು  ಅಪಾರ. ಅದರಲ್ಲೂ ಬಡಕುಟುಂಬದಲ್ಲಿ ಕುಟುಂಬದ ಮುಖ್ಯಸ್ಥನೇ ಮರಣ ಹೊಂದಿದರೆ ಕುಟುಂಬದ ಊರುಗೋಲನ್ನೆ ಕಳೆದುಕೊಂಡಂತೆ. ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸಲು ಸಹ ಕುಟುಂಬಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ಈ ನೋವನ್ನು ಸ್ವಲ್ಪಮಟ್ಟಿಗಾದರೂ  ಕಡಿಮೆ ಮಾಡಲು ಅಂತ್ಯ ಸಂಸ್ಕಾರ ಸಹಾಯ ನಿಧಿ  ಮತ್ತು ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ ಎಂಬ ರಾಜ್ಯಸರ್ಕಾರದ ಎರಡು ಯೋಜನೆಗಳು ಪ್ರಸ್ತುತ ಚಾಲ್ತಿಯಲ್ಲಿವೆ. ನಮ್ಮ ಹತ್ತಿರದ ಬಡ ಕುಟುಂಬಗಳಿಗೆ ಈ ರೀತಿಯಾದರೂ  ಸಹಾಯ ಮಾಡುವ  ಉದ್ದೇಶದಿಂದ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ.

ಅಂತ್ಯ ಸಂಸ್ಕಾರ ಸಹಾಯ ನಿಧಿ

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಯಾವುದೇ ಸದಸ್ಯ ಮೃತರಾದಲ್ಲಿ ಮೃತರ ಅಂತ್ಯಕ್ರಿಯೆಗಾಗಿ 5000 ರೂ. ಮೃತರ ಹತ್ತಿರದ ಕುಟುಂಬದ ಸದಸ್ಯರಿಗೆ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

-ವ್ಯಕ್ತಿ ಮೃತರಾದ ಎರಡು ತಿಂಗಳ ಒಳಗಾಗಿ ಹತ್ತಿರದ ಗ್ರಾಮ ಪಂಚಾಯತಿ, ನಾಡಕಚೇರಿ, ಅಟಲ್‌ಜಿ ಜನಸ್ನೇಹಿ ಕೇಂದ್ರ ಈ ಪೈಕಿ ಎಲ್ಲಿಯಾದರೂ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

-ಮೃತ ವ್ಯಕ್ತಿಯ ಹೆಸರು ಬಿ.ಪಿ.ಎಲ್. ಕಾರ್ಡ್ ನಲ್ಲಿ ಕಡ್ಡಾಯವಾಗಿ ಮೊದಲೇ ನಮೂದಾಗಿರಬೇಕು.

-ಬಡತನ ರೇಖೆಯ ಕುಟುಂಬದ ಯಾವುದೇ ಸದಸ್ಯ ಮರಣ ಹೊಂದಿದಲ್ಲಿ ಈ ಸಹಾಯಧನ ದೊರೆಯುವುದು.

-ಮೃತರ ಹೆಸರು, ವಯಸ್ಸು,ಲಿಂಗ, ಮರಣದ ಕಾರಣ, ಮರಣದ ದಿನಾಂಕವನ್ನು  ಆನ್‍ಲೈನ್ ಅರ್ಜಿಯಲ್ಲಿ ನಮೂದಿಸಬೇಕು.

ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ದುಡಿಯುವ ವ್ಯಕ್ತಿ  ಮೃತರಾದಲ್ಲಿ ಮೃತರ  ಹತ್ತಿರದ ಕುಟುಂಬದ ಸದಸ್ಯರಿಗೆ 20,000 ರೂ. ಪರಿಹಾರ ಮೊತ್ತವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

-ವ್ಯಕ್ತಿ ಮೃತರಾದ 6 ತಿಂಗಳ ಒಳಗಾಗಿ ಹತ್ತಿರದ ಗ್ರಾಮ ಪಂಚಾಯತಿ, ನಾಡಕಚೇರಿ, ಅಟಲ್‌ಜಿ ಜನಸ್ನೇಹಿ ಕೇಂದ್ರ ಈ ಪೈಕಿ ಎಲ್ಲಿಯಾದರೂ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

-ಮೃತ ವ್ಯಕ್ತಿಯ ಹೆಸರು ಬಿ.ಪಿ.ಎಲ್. ಕಾರ್ಡ್ ನಲ್ಲಿ ಕಡ್ಡಾಯವಾಗಿ ಮೊದಲೇ ನಮೂದಾಗಿರಬೇಕು.

-ಮೃತರ ವಯಸ್ಸು 18 ರಿಂದ 59 ವರ್ಷದ  ಒಳಗಿರಬೇಕು.

-ಬಡತನ ರೇಖೆಯ ಕುಟುಂಬದ ದುಡಿಯುವ ವ್ಯಕ್ತಿ  ಮರಣ ಹೊಂದಿದಲ್ಲಿ ಈ ಸಹಾಯಧನ ದೊರೆಯುವುದು.

ಮೃತರ ಹೆಸರು, ವಯಸ್ಸು,ಲಿಂಗ, ಮರಣದ ಕಾರಣ, ಮರಣದ ದಿನಾಂಕವನ್ನು  ಆನ್‍ಲೈನ್ ಅರ್ಜಿಯಲ್ಲಿ ನಮೂದಿಸಬೇಕು.

ಸುಭಾಶ್‌ ಕೆಳದಿ---
Previous articleಜನರ ಸಮಸ್ಯೆಗೆ ಸ್ಪಂದನೆ ನನ್ನ ಮೊದಲ ಆದ್ಯತೆ-‌ ಸುನಿಲ್‌ ಕುಮಾರ್
Next articleಪಕ್ಷ ಸಂಘಟನೆ ನನ್ನ ಗುರಿಯಾಗಿದೆ-ಸದಾಶಿವ ದೇವಾಡಿಗ

1 COMMENT

LEAVE A REPLY

Please enter your comment!
Please enter your name here