ಮೂರು ತಿಂಗಳಿನಿಂದ ಸರಕಾರಿ ಆಸ್ಪತ್ರೆ ಡಿʼಗ್ರೂಪ್‌ ನೌಕರರಿಗೆ ವೇತನವಿಲ್ಲ

0

ಕಾರ್ಕಳ : ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಡಿʼ ಗ್ರೂಪ್‌ ಕಾರ್ಮಿಕರು ತಮ್ಮ ಕರ್ತವ್ಯ ಸ್ಥಗಿತಗೊಳಿಸಿರುತ್ತಾರೆ. ಕಳೆದ ಮೂರು ತಿಂಗಳುಗಳಿಂದ ಮಾಸಿಕ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ 10 ಮಂದಿ ಕಾರ್ಮಿಕರು ಆ. 18ರಂದು ಕರ್ತವ್ಯ ಮುಂದುವರಿಸದೇ ಪ್ರತಿಭಟಿಸಿದರು. ಉಡುಪಿಯ ಗುತ್ತಿಗೆದಾರರೊಬ್ಬರು ಈ ನೌಕರರನ್ನು ನೇಮಕ ಮಾಡಿಕೊಂಡಿದ್ದು, ಮೇ ತಿಂಗಳಿನಿಂದ ಗುತ್ತಿಗೆದಾರರು ವೇತನ ಪಾವತಿ ಮಾಡಿರುವುದಿಲ್ಲ. ಪರಿಣಾಮವಾಗಿ ಈ ಕಾರ್ಮಿಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಇದೇ ಕೆಲಸವನ್ನು ನಂಬಿಕೊಂಡು ಬಂದಿರುವ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ತ್ರಾಸಪಡುವಂತಾಗಿದೆ. ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಮಿಕರು ಆಗ್ರಹಿಸುತ್ತಿದ್ದಾರೆ.---
Previous articleಒಳಚರಂಡಿ ಕಾಮಗಾರಿ ನಿಧಾನಗತಿ : ರಸ್ತೆ ಅವ್ಯವಸ್ಥೆ-ಟ್ರೋಲ್‌ ವಿಡಿಯೋ ವೈರಲ್
Next article41 ಲಕ್ಷ ಯುವಕರ ಉದ್ಯೋಗ ಕಸಿದ ಕೊರೊನಾ

LEAVE A REPLY

Please enter your comment!
Please enter your name here